ಮತದಾನ ಮುಕ್ತಾಯ: ಕಾಶ್ಮೀರ ಶೇ. 50, ಜಾರ್ಖಂಡ್ 62 ರಷ್ಟು ಮತದಾನ

ವಿಧಾನಸಭೆ ಚುನಾವಣೆ
ವಿಧಾನಸಭೆ ಚುನಾವಣೆ

ನವದೆಹಲಿ: ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ನಾಲ್ಕನೇ ಹಂತದ ಮತದಾನ ಭಾನುವಾರ ಶಾಂತಿಯುತವಾಗಿ ಮುಕ್ತಾಯವಾಗಿದೆ.

ಉಗ್ರರ ದಾಳಿ ಭೀತಿಯ ಕರಿ ನೆರಳಿನ ನಡುವೆಯೇ ಕಣಿವೆ ರಾಜ್ಯದಲ್ಲಿ ಮತದಾರ ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನ ಮುಕ್ತಾಯದ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 50ರಷ್ಟು ಮತದಾನವಾಗಿದೆ. ಜಾರ್ಖಂಡ್‌ನಲ್ಲೂ ಶೇ. 61.65 ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಒಟ್ಟು 87 ಕ್ಷೇತ್ರಗಳ ಪೈಕಿ ರಾಜಧಾನಿ ಶ್ರೀನಗರ, ಅನಂತ್‌ನಾಗ್, ಸೋಪಿಯಾನ್ ಹಾಗೂ ಸಾಂಬಾ ಜಿಲ್ಲೆಗಳ ಒಟ್ಟು 18 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್ ಸಯೀದ್ ಸೇರಿದಂತೆ 182 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆ ಸೇರಿದೆ.

ನಕ್ಸಲ್​ ಪೀಡಿತ ರಾಜ್ಯ ಜಾರ್ಖಂಡ್'​ನಲ್ಲೂ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು ಶೇ.62 ರಷ್ಟು ದಾಖಲೆಯ ಮತದಾನವಾಗಿದೆ. ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಮರಾಂಡಿ, ಮೂವರು ಹಾಲಿ ಸಚಿವರು ಸೇರಿದಂತೆ 217 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com