
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಕಳೆದ 13 ತಿಂಗಳಿನಲ್ಲಿ ಕಾಣದಷ್ಟು 63.46ಕ್ಕೆ ರೂಪಾಯಿ ಮೌಲ್ಯ ಕುಸಿತ ಉಂಟಾಗಿದೆ.
ಇಂದು ಬೆಳಿಗ್ಗೆ ಷೇರುಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಅಮೆರಿಕಾ ಡಾಲರ್ ಎದುರು ರೂಪಾಯಿ ಮೌಲ್ಯ 63.46ಕ್ಕೆ ಕುಸಿತವಾಯಿತು.
ದೇಶಿಯ ಷೇರು ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಇಳಿಕೆ ಹಾಗೂ ಅಮೆರಿಕಾ ಬ್ಯಾಂಕುಗಳ ವಿದೇಶಿ ವಿನಿಮಯದ ಒತ್ತಡದಿಂದಾಗಿ ಭಾರತದ ರೂಪಾಯಿ ಮೌಲ್ಯ ಕುಸಿತ ಕಂಡಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತರೆ ದೇಶಗಳ ರೂಪಾಯಿ ಮೌಲ್ಯವನ್ನು ಹಿಂದಿಡುವ ಮೂಲಕ, ಅಮೆರಿಕ ತನ್ನ ಡಾಲರ್ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
ಈ ನಡುವೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲೂ ಬಾರಿ ಕುಸಿತ ಉಂಟಾಗಿದ್ದು, ರೂಪಾಯಿ ಮೌಲ್ಯದ ಮೇಲೆ ಪ್ರಭಾವ ಬೀರಿದೆ.
ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 62.94ನಷ್ಟಿದ್ದು, ಇಂದು ಬೆಳಿಗ್ಗೆ 63.46ಕ್ಕೆ ಸುಧಾರಣೆಗೊಂಡಿತು.
Advertisement