ರೆಡ್ಡಿಗೆ ಇನ್ನೂ 20 ದಿನ ಜೈಲೇ ಗತಿ

ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ...
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ

ನವದೆಹಲಿ: ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಡಿ ಸಚಿವ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿಲ್ಲ. ಹೀಗಾಗಿ ರೆಡ್ಡಿ ಜ.5ರವರೆಗಂತೂ ಜೈಲಿನಲ್ಲೇ ಇರುವುದು ಅನಿವಾರ್ಯ.

ಅರ್ಜಿ ವಿಚಾರಣೆಯನ್ನು ಇಂದೇ ನಡೆಸಬೇಕು ಎಂಬ ಜನಾರ್ದನ ರೆಡ್ಡಿ ಪರ ವಕೀಲರ ಮನವಿಯನ್ನು ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ನ್ಯಾಯಪೀಠ ತಿರಸ್ಕರಿಸಿತು. ರೆಡ್ಡಿ ಪರ ವಕೀಲರು ತಮ್ಮ ಕಕ್ಷಿದಾರರು ನಲವತ್ತು ತಿಂಗಳಿಂದ ಜೈಲಿನಲ್ಲಿದ್ದಾರೆ. ಅರ್ಜಿಯನ್ನು ಇಂದೇ ಪರಿಗಣಿಸಿ ಎಂದು ಕೋರಿದರು.

ಜೈಲಿನಲ್ಲಿದ್ದಾರೆ ಎಂದು ನಿಯಮ ಮೀರಿ ವಿಚಾರಣೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು ಮುಂದಿನ ವಾರ ವಿಚಾರಣೆ ಕೈಗೆತ್ತಿಕೊಳ್ಳೋಣ ಎಂದು ತಿಳಿಸಿದರು.

ಮುಂದಿನ ವಾರದಿಂದ ಅಂದರೆ ಡಿ.22 ರಿಂದ ಸುಪ್ರೀಂ ಕೋರ್ಟ್‌ಗೆ ಎರಡು ವಾರ ಕ್ರಿಸ್‌ಮಸ್ ರಜೆ ಇದೆ. ಹೀಗಾಗಿ ಜನಾರ್ದನ ರೆಡ್ಡಿ ಅರ್ಜಿ ವಿಚಾರಣೆ ಜನವರಿ 5ರ ನಂತರವೇ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com