2 ವರ್ಷದಲ್ಲಿ 'ಮಾನವಸಹಿತ ಯಾನ' : ಡಾ.ರಾಧಾಕೃಷ್ಣನ್

ಇನ್ನೆರಡು ವರ್ಷದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾನವ ಸಹಿತ ಅಂತರಿಕ್ಷ ಯಾನ ಯೋಜನೆಯನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದರು.
ಜಿಎಸ್‌ಎಲ್‌ವಿ ಮಾರ್ಕ್-3 ಯಶಸ್ವಿ ಉಡಾವಣೆ ಹಿನ್ನಲೆಯಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ (ಸಂಗ್ರಹ ಚಿತ್ರ)
ಜಿಎಸ್‌ಎಲ್‌ವಿ ಮಾರ್ಕ್-3 ಯಶಸ್ವಿ ಉಡಾವಣೆ ಹಿನ್ನಲೆಯಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ (ಸಂಗ್ರಹ ಚಿತ್ರ)

ಶ್ರೀಹರಿಕೋಟಾ: ಇನ್ನೆರಡು ವರ್ಷದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾನವ ಸಹಿತ ಅಂತರಿಕ್ಷ ಯಾನ ಯೋಜನೆಯನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದರು.

ಗುರುವಾರ ಬೆಳಗ್ಗೆ ಜಿಎಸ್‌ಎಲ್‌ವಿ ಮಾರ್ಕ್-3 ಯಶಸ್ವಿ ಉಡ್ಡಯನದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ ಅವರು, ಉಡಾವಣೆಗೆ ಸಹಕರಿಸಿದ ಎಲ್ಲ ಸಹೋದ್ಯೋಗಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹುನಿರೀಕ್ಷಿತ ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಅನ್ನು ನಭಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ನಾವು ನಿಗದಿ ಪಡಿಸಿದ ದೂರವನ್ನು ರಾಕೆಟ್ ನಿಗದಿತ ಸಮಯದಲ್ಲಿ ಕ್ರಮಿಸಿದೆ. ಮುಂದಿನ ತುಂಬಾ ಪ್ರಮುಖವಾದ ಯೋಜನೆ ಪ್ರಸ್ತುತ ಉಡಾವಣೆ ಉತ್ತಮ ಅಡಿಪಾಯ ಹಾಕಿಕೊಟ್ಟಿದೆ. ಎನ್ನೆರಡು ವರ್ಷದಲ್ಲಿ ಭಾರತದ ಬಹುದಿನಗಳ ಕನಸಾದ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.

ವಿಜ್ಞಾನಿಗಳಿಗೆ ಪ್ರಧಾನಿ ಅಭಿನಂದನೆ
ಜಿಎಸ್‌ಎಲ್‌ವಿ ಮಾರ್ಕ್-3 ನೌಕೆಯ ಯಶಸ್ವಿ ಉಡಾವಣೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜಿಎಸ್‌ಎಲ್‌ವಿ ಮಾರ್ಕ್-3 ಯಶಸ್ವಿ ಉಡಾವಣೆಯಿಂದಾಗಿ ಇಸ್ರೋ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಉಡಾವಣೆಯ ಯಶಸ್ವಿ ವಿಜ್ಞಾನಿಗಳ ಕಠಿಣ ಪರಿಶ್ರಮ ಮತ್ತು ಬುದ್ದಿವಂತಿಕೆಯ ಫಲವಾಗಿದೆ. ಯೋಜನೆಯಲ್ಲಿ ಪಾಲ್ಗೊಂಡಿರುವ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com