ಚಳಿಗೆ ಉತ್ತರ ಪ್ರದೇಶ ತತ್ತರ: 24 ಸಾವು

ತೀವ್ರ ಚಳಿಗೆ ಉತ್ತರ ಪ್ರದೇಶ ತೀವ್ರವಾಗಿ ತತ್ತರಿಸಿದ್ದು...
ಭೀಕರ ಚಳಿಯ ಮಧ್ಯೆಯೂ ಶಾಲೆಗೆ ಹೋಗುತ್ತಿರುವ ಅಮೃತಸರದ ಮಕ್ಕಳು
ಭೀಕರ ಚಳಿಯ ಮಧ್ಯೆಯೂ ಶಾಲೆಗೆ ಹೋಗುತ್ತಿರುವ ಅಮೃತಸರದ ಮಕ್ಕಳು

ಲಖನೌ/ಡೆಹ್ರಾಡೂನ್: ತೀವ್ರ ಚಳಿಗೆ ಉತ್ತರ ಪ್ರದೇಶ ತೀವ್ರವಾಗಿ ತತ್ತರಿಸಿದ್ದು, ಭೀಕರ ಚಳಿಯಿಂದಾಗಿ ಕಳೆದ 24 ಗಂಟೆಗಳಲ್ಲಿ 24 ಮಂದಿ ಅಸುನೀಗಿದ್ದಾರೆ.

ಉತ್ತರ ಪ್ರದೇಶದ ಹಲ್ದ್‌ವಾನಿಯಲ್ಲಿ ಇಬ್ಬರು, ನೈನಿತಾಲ್‌ನಲ್ಲಿ ಮೂವರು ಸೇರಿದಂತೆ ಭೀಮ್‌ತಲ್ ಹಾಗೂ ಬಾಗೆಶ್ವರ್‌ನಲ್ಲಿ 6 ಮಂದಿ ಸಾವನ್ನಪ್ಪಿದ್ದು ಒಟ್ಟು 24 ಮಂದಿ ಶೀತ ಗಾಳಿಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಾಗೇಶ್ವರ ಮತ್ತು ಅಲ್ಮೋರಾ ಹಿಮಾಲಯದಲ್ಲಿ ಅತೀವ ಚಳಿಯಿದ್ದು, ಡಿಸೆಂಬರ್ ಮಧ್ಯಂತರಲ್ಲಿ ಈ ರೀತಿಯ ಚಳಿಯ ಅನುಭವವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಅಲ್ಮೋರಾ, ಪಿಥೋರಗಡ್ ಮತ್ತು ಕುಮಾನ್‌ನಲ್ಲಿರುವ ಪ್ರದೇಶಗಳಲ್ಲಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ನಿಂದ ಮೈನಸ್ 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಲಖನೌನಲ್ಲಿ 6.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಬುಧವಾರ ದಾಖಲಾಗಿದೆ. ಇದು ಸಾಮಾನ್ಯ ತಾಪಾಮಾನಕ್ಕಿಂತ ಕಡಿಮೆ ತಾಪಮಾನ ಎಂದು ವರದಿಯಾಗಿದೆ. ಈಗಾಗಲೇ ಉತ್ತರ ಪ್ರದೇಶದಾದ್ಯಂತ ಮಂಜು ಬೀಳುತ್ತಿದ್ದು, ಶೀತ ಗಾಳಿ ಬೀಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com