
ಹೈದರಾಬಾದ್: ಗಣಿ ಅಕ್ರಮ ಪ್ರಕರಣದಲ್ಲಿ ಜಾಮೀನು ಪಡೆಯಲು ಲಂಚ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಆಂಧ್ರಪ್ರದೇಶ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಹತ್ತು ಮಂದಿಗೆ ವಿವಿಧ ಕೋರ್ಟ್‌ಗಳು ಈಗಾಗಲೇ ಜಾಮೀನು ನೀಡಿವೆ. 2012ರಲ್ಲಿ ಬಹಿರಂಗವಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಭ್ರಷ್ಟಾಚಾರ ನಿಗ್ರಹ ದಳ(ಎಬಿಸಿ) ಪ್ರಕರಣ ದಾಖಲಿಸಿತ್ತು. ಲಂಚ ತೆಗೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಪಟ್ಟಾಭಿರಾಮ್ ರಾವ್‌ರನ್ನು ಸಸ್ಪೆಂಡ್ ಮಾಡಲಾಗಿತ್ತು.
ರೆಡ್ಡಿಗೆ ಜಾಮೀನು ನೀಡಲು ಸಿಬಿಐ 7 ಷರತ್ತುಗಳನ್ನು ವಿಧಿಸಿತ್ತು. ಅರದಲ್ಲಿ ಜಾಮೀನು ಸಿಕ್ಕಿದ ಬಳಿಕ ರೆಡ್ಡಿ ಬಳ್ಳಾರಿಗೆ ತೆರಳಲು ಅನುಮತಿ ನೀಡಬಾರದು ಎಂದು ಆಕ್ಷೇಪಿಸಿತ್ತು. ಆದರೆ ಅದಕ್ಕೆ ರೆಡ್ಡಿ ಪರ ವಕೀಲರು ಒಪ್ಪಿರಲಿಲ್ಲ ಎನ್ನಲಾಗಿದೆ.
ಪ್ರಕರಣದಲ್ಲಿ ಜಾಮೀನು ಸಿಕ್ಕಿದರೂ ರೆಡ್ಡಿ ಕಾರಾಗೃಹ ವಾಸದಿಂದ ಹೊರ ಬರಲು ಜನವರಿ ತಿಂಗಳ 2ನೇ ವಾರದವರೆಗೆ ಕಾಯಬೇಕು. ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟನಲ್ಲಿ ಮತ್ತೊಂದು ಪ್ರಕರಣದ ವಿಚಾರಣೆ ಬಾಕಿ ಉಳಿದಿದೆ.
Advertisement