

ನವದೆಹಲಿ: ಪೇಶಾವರ ಮಾದರಿಯಲ್ಲಿ ಭಾರತದ ಶಾಲೆಗಳ ಮೇಲೂ ಉಗ್ರರು ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗೆ ಕೇಂದ್ರ ಸರ್ಕಾರ ನಿಯಮಾವಳಿಗಳನ್ನುರೂಪಿಸಿ ದೇಶದ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ. ದಾಳಿ ವೇಳೆ ಉಗ್ರರಿಂದ ತಪ್ಪಿಸಿಕೊಳ್ಳುವುದು ಮತ್ತು ಈ ಕುರಿತು ಮಕ್ಕಳಿಗೆ ಯಾವ ರೀತಿ ತರಬೇತಿ ನೀಡಬೇಕು ಎನ್ನುವ ವಿಚಾರಗಳೂ ಈ ಸುತ್ತೋಲೆಯಲ್ಲಿವೆ.
ಏನು ಸೂಚನೆ?
ಉಗ್ರರ ದಾಳಿ ಸಂದರ್ಭದಲ್ಲಿ ಶಿಕ್ಷಕರು ಮತ್ತು ಮಕ್ಕಳು ತಮ್ಮ ತರಗತಿಯಿಂದ ಹೊರಬರಬಾರದು.
ಶಾಲೆ ಬಾಗಿಲು ಮತ್ತು ಕಿಟಕಿಗಳನ್ನು ಒಳಗಿನಿಂದ ಮುಚ್ಚಬೇಕು. ನೆಲದ ಮೇಲೆ ಮಲಗಬೇಕು.
ದಾಳಿ ಸಂದರ್ಭದಲ್ಲಿ ಪೋಷಕರು ನೇರವಾಗಿ ಶಾಲೆಯತ್ತ ಧಾವಿಸಬಾರದು. ತುರ್ತು ಪರಿಸ್ಥಿತಿಯಲ್ಲಿ ಪೋಷಕರು ಸೇರಲು ಸ್ಥಳವೊಂದನ್ನು ಪೊಲೀಸರೇ ಗುರುತಿಸಬೇಕು. ಮಕ್ಕಳ ಬಗ್ಗೆ ಮಾಹಿತಿ ರವಾನಿಸುವ ವ್ಯವಸ್ಥೆ ಮಾಡಬೇಕು
ಉಗ್ರ ದಾಳಿಯಂಥ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಾಲೆಯಲ್ಲಿ ನಿಯಮಿತವಾಗಿ ಅಭ್ಯಾಸ ಕೈಗೊಳ್ಳಬೇಕು.
ಶಾಲೆಗಳ ಸುತ್ತ ಕಾಂಕ್ರೀಟ್ ಗೋಡೆ ಕಟ್ಟಬೇಕು. 3-4 ಗೋಡೆ ಕಟ್ಟಬೇಕು. ಕನಿಷ್ಠ 3 ಗೇಟ್‌ಗಾದರೂ 24 ಗಂಟೆ ಭದ್ರತಾ ಸಿಬ್ಬಂದಿಯನ್ನು ಕಾವಲಿಗಾಗಿ ನೇಮಿಸಿರಬೇಕು. ಪೊಲೀಸ್ ಕಂಟ್ರೋಲ್ ರೂಂ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ
ಇಟ್ಟು ಕೊಂಡಿರಬೇಕು. ಬೌಂಡರಿಯ ಸುತ್ತಲೂ ಸಿಸಿಟಿವಿ ಅಳವಡಿಸಬೇಕು.