
ನವದೆಹಲಿ: ವೀಸಾ ವಂಚನೆ ಪ್ರಕರಣ ಸಂಬಂಧ ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಶನಿವಾರ ಕೇಂದ್ರ ಸರ್ಕಾರ ಕರ್ತವ್ಯ ಮುಕ್ತಗೊಳಿಸಿದೆ.
ದೇವಯಾನಿ ಅವರು ಸರ್ಕಾರದ ಅನುಮತಿ ಪಡೆಯದೇ ಪ್ರಕರಣದ ಕುರಿತು ಟಿವಿ ಮಾಧ್ಯವೊಂದಕ್ಕೆ ಸಂದರ್ಶನ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು, ಸದ್ಯ ಅವರನ್ನು ಸೇವಾ ಮುಕ್ತಗೊಳಿಸಿರುವ ಸರ್ಕಾರ, ಅವರನ್ನು 'ಕಡ್ಡಾಯ ನಿರೀಕ್ಷೆ'ಗೆ ಸ್ಥಳಾಂತರಿಸಲಾಗಿದೆ. ದೇವಯಾನಿ ಅವರು ಅಭಿವೃದ್ಧಿ ಸಹಯೋಗ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
1999ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಅಮೆರಿಕ ಅಧಿಕಾರಿಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ವೀಸಾ ವಂಚನೆ ಪ್ರಕರಣ ಸಂಬಂಧ ಬಂಧಿಸಿ, ಕ್ಯಾವಿಟಿ ಸರ್ಚ್ ನಡೆಸಿದ್ದರು. ಇದರಿಂದ ಅಮೆರಿಕ ಮತ್ತು ಭಾರತದ ನಡುವಿನ ಹಲವು ವರ್ಷಗಳ ಉತ್ತಮ ಬಾಂಧವ್ಯಕ್ಕೆ ಧಕ್ಕೆಯಾಗಿತ್ತು.
Advertisement