ಭಾರತದ ಆಕ್ರೋಶಕ್ಕೆ ಮಣಿದ ಪಾಕ್: ಲಖ್ವಿಗೆ 3 ತಿಂಗಳ ಅಂದರ್

ಕಟುಕ ಲಖ್ವಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೆ ಮೂರು ತಿಂಗಳ ಅವಧಿವರೆಗೆ ಪಾಕಿಸ್ತಾನ ಜೈಲಿಗಟ್ಟಿದೆ.
ಮುಂಬೈ ದಾಳಿ ಸೂತ್ರಧಾರ, ಲಷ್ಕರ್-ಎ-ತೋಯ್ಬಾ ಮುಖ್ಯ ಕಮಾಂಡರ್ ಝಕಿ-ಉರ್ ರೆಹಮಾನ್ ಲಖ್ವಿ (ಸಂಗ್ರಹ ಚಿತ್ರ)
ಮುಂಬೈ ದಾಳಿ ಸೂತ್ರಧಾರ, ಲಷ್ಕರ್-ಎ-ತೋಯ್ಬಾ ಮುಖ್ಯ ಕಮಾಂಡರ್ ಝಕಿ-ಉರ್ ರೆಹಮಾನ್ ಲಖ್ವಿ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಮುಂಬೈ ದಾಳಿ ಸೂತ್ರಧಾರ, ಲಷ್ಕರ್-ಎ-ತೋಯ್ಬಾ ಮುಖ್ಯ ಕಮಾಂಡರ್ ಝಕಿ-ಉರ್ ರೆಹಮಾನ್ ಲಖ್ವಿ ಬಿಡುಗಡೆಗೆ ಭಾರತದಾದ್ಯಂತ ಮತ್ತು ಸಂಸತ್ತಿನಲ್ಲಿ ವ್ಯಕ್ತವಾದ ಆಕ್ರೋಶಕ್ಕೆ ಪಾಕಿಸ್ತಾನ ಕೊನೆಗೂ ಮಣಿದಿದೆ. ಕಟುಕ ಲಖ್ವಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೆ ಮೂರು ತಿಂಗಳ ಅವಧಿವರೆಗೆ ಜೈಲಿಗಟ್ಟಿದೆ.

ಮುಂಬೈ ದಾಳಿ ಪ್ರಕರಣದಲ್ಲಿ 2009ರಿಂದ ಜೈಲಿನಲ್ಲಿರುವ ಲಖ್ವಿಗೆ ಸಾಕ್ಷ್ಯಾಧಾರಗಳ ಕೊರೆತೆ ಆಧಾರದ ಮೇಲೆ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಜಾಮೀನು ನೀಡಿತ್ತು. ಅದರಂತೆ ರಾವಲ್ಪಿಂಡಿಯ ಅಧಿಯಾಲ ಜೈಲಿನಿಂದ ಲಖ್ವಿ ಶುಕ್ರವಾರಿ ಬಿಡುಗಡೆಯಾಗಬೇಕಿತ್ತು. ಆದರೆ, ಇದರ ವಿರುದ್ಧ ಭಾರತ ಮಾತ್ರವಲ್ಲದೆ ಪಾಕ್‌ನೊಳಗೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಲಖ್ವಿಯನ್ನು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು (ಎಂಪಿಒ) ಸರ್ಕಾರ ವಶಕ್ಕೆ ತೆಗೆದುಕೊಂಡಿತು.

ಹೈಕೋರ್ಟ್‌ಗೆ ಅರ್ಜಿ: ಲಖ್ವಿಗೆ ಜಾಮೀನು ನೀಡಿದ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಪಾಕ್ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಲಖ್ವಿ ಜಾಮೀನನ್ನು ಸೋಮವಾರ ಇಸ್ಲಾಮಾಬಾದ್ ನ್ಯಾಯಾಲಯದಲ್ಲಿ  ಪ್ರಶ್ನಿಸಲಾಗುವುದು ಎಂದು ಸರ್ಕಾರಿ ವಕೀಲ ಮುಹಮ್ಮದ್ ಅಜರ್ ಚೌಧರಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com