
ನವದೆಹಲಿ: ಬ್ಯಾಟರಿ ಚಾರ್ಜರ್ ಮೊಬೈಲ್ ಫೋನ್‌ನ ಪೂರಕ ಸಾಧನವೇ ಹೊರತು ಅದರ ಅವಿಭಾಜ್ಯ ಭಾಗ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಸಂಬಂಧ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದ ನ್ಯಾ.ಎಸ್.ಜೆ. ಮುಖ್ಯೋಪಾಧ್ಯಾಯ ಮತ್ತು ನ್ಯಾ. ಎಂ.ಬಿ ಲೋಕೂರ್ ಅವರಿದ್ದ ಪೀಠ, ಮೌಲ್ಯವರ್ಧಿತ ತೆರಿಗೆ ನ್ಯಾಯಮಂಡಳಿ ನೀಡಿದ್ದ ಆದೇಶಕ್ಕೆ ಒಪ್ಪಿಗೆ ಸೂಚಿಸಿದೆ.
ಮೊಬೈಲ್ ಮತ್ತು ಚಾರ್ಜರ್ ಅನ್ನು ಪ್ರತ್ಯೇಕವಾಗಿ ಪರಿಗಣಿಸಿ ತೆರಿಗೆ ವಿಧಿಸಬೇಕು ಎಂದು ನ್ಯಾಯಮಂಡಳಿ ಆದೇಶ ನೀಡಿತ್ತು.
ನ್ಯಾಯಮಂಡಳಿಯ ಈ ಆದೇಶವನ್ನು ಪ್ರಶ್ನಿಸಿ ಹಿಂದಿನ ನೋಕಿಯಾ ಇಂಡಿಯಾ ಹೈಕೋರ್ಟ್ ಮೊರೆ ಹೋಗಿತ್ತು. ಚಾರ್ಜರ್ ಸೆಲ್‌ಫೋನ್‌ನ ಅವಿಭಾಜ್ಯ ಅಂಗವಾಗಿದ್ದು, ಮೊಬೈಲ್‌ಗೆ ನೀಡಲಾಗಿರುವ ತೆರಿಗೆ ಪ್ರಮಾಣದಲ್ಲಿನ ವಿನಾಯಿತಿ ಚಾರ್ಜರ್‌ಗೂ ಅನ್ವಯವಾಗಬೇಕು ಎಂದು ವಾದಿಸಿತ್ತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ನೋಕಿಯಾ ಪರ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪು ಬದಿಗಿಟ್ಟು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಚಾರ್ಜರ್ ಪ್ರತ್ಯೇಕ ಉತ್ಪನ್ನ. ಇದನ್ನು ಪ್ರತ್ಯೇಕವಾಗಿ ಮಾರಾಟ ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ.
Advertisement