ನವದೆಹಲಿ: ಕಣಿವೆ ರಾಜ್ಯದಲ್ಲಿ ಕಮಲ ಅರಳಿಸುವ ಬಿಜೆಪಿ ಆಸೆಗೆ ತಣ್ಣೀರು. ಆದರೆ ಪೂರ್ವ ರಾಜ್ಯ ಜಾರ್ಖಂಡ್‌ನಲ್ಲಿ ಭರ್ಜರಿ ಜಯ.
ಇದು ವಿವಿಧ ಸಂಸ್ಥೆಗಳಶು ನಡೆಸಿರುವ ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿರುವ ಭವಿಷ್ಯ. ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಮತಗಟ್ಟೆ ಸಮೀಕ್ಷೆಗಳ ವರದಿ ಹೊರಬಿದ್ದಿದೆ. ಜಮ್ಮು ಮತ್ತು ಕಾಶ್ನೀರದಲ್ಲಿ 44ಕ್ಕೂ ಹೆಚ್ಚು ಟಾರ್ಗೆಟ್ ಹಾಕಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಚುನಾವಣೆ ಎದುರಿದ್ದ ಬಿಜೆಪಿ ತನ್ನ ಗುರಿ ಸಾಧಿಸುವಲ್ಲಿ ವಿಫಲವಾಗಲಿದೆ ಎನ್ನುವುದು ಸಮೀಕ್ಷೆಗಳವಾದ.
ಆದರೆ ಜಾರ್ಖಂಡ್‌ನಲ್ಲಿ ಮೋದಿ ಹವಾ ಕೆಲಸ ಮಾಡಲಿದ್ದು, ಜೆಎಂಎಂ ಹಾಗೂ ಕಾಂಗ್ರೆಸ್ ಅನ್ನು ಮಲಗಿಸಲಿದೆ. ಇಲ್ಲಿ ಬಿಜೆಪಿ 37-52ರಷ್ಟು ಸೀಟುಗಳನ್ನು ಗಳಿಸಿ ಸರ್ಕಾರ ರಚಿಸುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ ಎನ್ನುತ್ತವೆ ಸಮೀಕ್ಷೆಗಳು.
Advertisement