2015ರ ವಿಶ್ವಕಪ್ ಗೆ ಸಚಿನ್ ರಾಯಭಾರಿ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಂತಾರಾಷ್ಟ್ರೀಯ...
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2015ರ ಏಕದಿನ ವಿಶ್ವಕಪ್ ನ ಪ್ರಚಾರ ರಾಯಭಾರಿಯಾನ್ನಾಗಿ ಆಯ್ಕೆ ಮಾಡಿದೆ.

ವಿಶ್ವಕಪ್ಗೆ ಇನ್ನೂ 55 ದಿನಗಳಷ್ಟೇ ಬಾಕಿ ಉಳಿದಿದ್ದು, ಅಂಬಾಸಿಡರ್ ಆಗಿ ಆಯ್ಕೆಗೊಂಡಿರುವ ಸಚಿನ್ ತೆಂಡುಲ್ಕರ್ ವಿಶ್ವದ ಮೂರನೇ ಅತಿ ದೊಡ್ಡ ಕ್ರೀಡಾಕೂಟವೆನಿಸಿರುವ ಐಸಿಸಿಯ ವಿಶ್ವಕಪ್ ಕ್ರಿಕೆಟ್ನ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳು 2015ರ ವಿಶ್ವ ಕಪ್ ಕ್ರಿಕೆಟ್ ನ ಅತಿಥ್ಯವಹಿಸಲಿದ್ದು, ಈ ಪಂದ್ಯಾವಳಿ ಫೆಬ್ರವರಿ 14 ರಿಂದ ಮಾರ್ಚ್ 29ರವರೆಗೆ ನಡೆಯಲಿದೆ.

ವಿಶ್ವಕಪ್ಗೆ ರಾಯಭಾರಿ ಕುರಿತಂತೆ ಇಂದು ಅಧಿಕೃತವಾಗಿ ಘೋಷಣೆ ಮಾಡಿರುವ ಐಸಿಸಿ, 'ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರನ್ನು ವಿಶ್ವಕಪ್ ರಾಯಭಾರಿಯಾಗಿ ಆಯ್ಕೆ ಮಾಡಿರುವುದಕ್ಕೆ ನಮಗೆ ಹೆಮ್ಮೆಯಿದೆ' ಎಂದು ಹೇಳಿದೆ.

'ವಿಶ್ವಕಪ್ ರಾಯಭಾರಿಯಾಗಿ ನನ್ನನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸತತ ಎರಡನೇ ಬಾರಿ ಆಯ್ಕೆ ಮಾಡಿರುವುದು ಅತ್ಯಂತ ಸಂತಸಕರ ಸಂಗತಿಯಾಗಿದ್ದು, ಇದನ್ನು ನಾನು ಗೌರವಿಸುತ್ತೇನೆ. ಕಳೆದ ಆರು ವಿಶ್ವಕಪ್ನಲ್ಲಿ ನಾನೊಬ್ಬ ಆಟಗಾರನಾಗಿ ಆಡಿದ್ದೆ. ಆದರೆ ಈ ಬಾರಿಯ ವಿಶ್ವಕಪ್ ಬೇರೆ ರೀತಿಯ ಅನುಭವ ಕೊಡಲಿದೆ' ಎಂದು ಸಚಿನ್ ತೆಂಡುಲ್ಕರ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com