ಪಂಚಭೂತಗಳಲ್ಲಿ ಕೆ.ಬಾಲಚಂದರ್ ಲೀನ

'ತಪ್ಪಿದ ತಾಳ' ಚಿತ್ರದ ಮೂಲಕ ಕನ್ನಡ ಸಿನಿ ಪಯಣ ಆರಂಭಿಸಿದ್ದರು...
ನಿರ್ದೇಶಕ ಕೆ.ಬಾಲಚಂದರ್
ನಿರ್ದೇಶಕ ಕೆ.ಬಾಲಚಂದರ್

ಚೆನ್ನೈ: ದಕ್ಷಿಣ ಭಾರತ ಸಿನಿಮಾ ರಂಗದ ದಿಗ್ಗಜ ನಿರ್ದೇಶಕ ಕೆ.ಬಾಲಚಂದರ್ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಚೆನ್ನೈನಲ್ಲಿರುವ ಬೆಸೆಂಟ್ ನಗರದಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯ ಕ್ರಿಯೆ ನಡೆಯಿತು.

ಕೆಬಿ ಅವರ ಅಂತಿಮ ಯಾತ್ರೆಗೆ ರಜನಿಕಾಂತ್, ನಿದೇರ್ಶಕ ಮಣಿರತ್ನಂ, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ನಟಿ ಜಯಪ್ರದ, ಕಲಾವಿಧರ ಸಂಘದ ಅಧ್ಯಕ್ಷ ಶರತ್‌ಕುಮಾರ್, ಸುಹಾಸಿನಿ, ಪ್ರಕಾಶ್ ರೈ, ವಿಜಯ್‌ಕಾಂತ್ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು.

ನಟ ಕಮಲ್‌ಹಾಸನ್ ಚಿತ್ರೀಕರಣಕ್ಕಾಗಿ ಹೊರ ದೇಶಕ್ಕೆ ಹೊರಟಿದ್ದು, ಕೆ.ಬಾಲಚಂದರ್ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.

ನೂರು ಚಿತ್ರಗಳ ಸರದಾರ ಕೆ.ಬಾಲಚಂದರ್ ಆನಾರೋಗ್ಯದ ಹಿನ್ನೆಲೆಯಲ್ಲಿ ನೆನ್ನೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದರು. ಮಧುರವಾದ ಹಾಡುಗಳೇ ಕೆಬಿ ಅವರ ಚಿತ್ರಗಳ ಹೈಲೆಟ್ಸ್ ಆಗಿದ್ದವು.

ಕೆಬಿ ಎಂದೇ ತಮಿಳುಚಿತ್ರ ರಂಗದಲ್ಲಿ ಪ್ರಸಿದ್ದರಾಗಿದ್ದರು. ಇವರ ನಿಧನದಿಂದಾಗಿ ತಮಿಳು ಚಿತ್ರರಂಗ ಬಡವಾಗಿದೆ. ದಕ್ಷಣ ಭಾರತದ ಹಲವು ನಟರಿಗೆ ಕೆ.ಬಾಲಚಂದರ್ ಅವರು ಗುರುಗಳಾಗಿದ್ದರು. 1978ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕೆಬಿ 'ತಪ್ಪಿದ ತಾಳ' ಚಿತ್ರದ ಮೂಲಕ ಕನ್ನಡ ಸಿನಿ ಪಯಣ ಆರಂಭಿಸಿದ್ದರು. 'ಸುಂದರ ಸ್ವಪ್ನ' 'ಬೆಂಕಿಯಲ್ಲಿ ಅರಳಿದ ಹೂ' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com