ಕ್ರಿಸ್‌ಮಸ್ ಪ್ರಯುಕ್ತ ಟ್ವೀಟ್ ಮಾಡಿ ಯಡವಟ್ಟು ಮಾಡಿಕೊಂಡ ದೂರದರ್ಶನ

ದೂರದರ್ಶನ
ದೂರದರ್ಶನ

ನವದೆಹಲಿ: ದೂರದರ್ಶನ ತನ್ನ ಅಧಿಕೃತ ಟ್ವೀಟರ್‌ನಲ್ಲಿ ಕ್ರಿಸ್‌ಮಸ್ ಪ್ರಯುಕ್ತ ಟ್ವೀಟೊಂದನ್ನು ಮಾಡಿ ಯಡವಟ್ಟು ಮಾಡಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಚಿವರುಗಳಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರೊಂದಿಗೆ ನಡೆಸುತ್ತಿರುವ ಸಭೆಯ ಚಿತ್ರವನ್ನು ಟ್ವಿಟ್ ಮಾಡಿದ್ದು ಅದರಲ್ಲಿ ಕ್ರಿಸ್ ಮಸ್ ಅಂಗವಾಗಿ ಮಂಗಗಳಿಗೆ ತಿನಿಸು ನೀಡುತ್ತಿರುವ ಸಾಂತಾಕ್ಲಾಸ್ ಎಂಬ ಶೀರ್ಷಿಕೆ ನೀಡಿದ್ದ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ.

ಇದರಿಂದ ಕೂಡಲೇ ಎಚ್ಚೇತ ದೂರದರ್ಶನ ಆಡಳಿತ ಮಂಡಳಿ ಟ್ವೀಟನ್ನು ಅಳಿಸಿ ಹಾಕಲಾಗಿದ್ದು, ಪ್ರೀತಿಯ ದೂರದರ್ಶನ ಅಭಿಮಾನಿಗಳಿಗೆ ವಿನಂತಿ, ಕೆಲ ದೋಷಕಂಡು ಬಂದಿದ್ದು, ಕೂಡಲೇ ಅದನ್ನು ಸರಿ ಮಾಡಿ ಸುದ್ದಿಗೆ ಸೂಕ್ತವಾದ ಚಿತ್ರವನ್ನು ಹಾಕಲಾಗುವುದು ಎಂದು ಹೇಳಿದೆ.

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದ ಮಹಾನುಭಾವರೊಬ್ಬರು ವೇದಿಕೆ ಮೇಲಿದ್ದ ನಿರೂಪಕಿಯನ್ನು 'Dumb anchor at IFFI' ಎಂದು ಹೇಳುವ ಮೂಲಕ ಸಾರ್ವಜನಿಕರಿಂದ ಟೀಕೆಗೆ ಒಳಗಾಗಿದ್ದರಲ್ಲದೇ ಸಾಮಾಜಿಕ ಜಾಲ ತಾಣ ಫೇಸ್ ಬುಕ್ಕಿನಲ್ಲೂ ಈ ವಿಡಿಯೋ ಹರಿದಾಡಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com