
ನವದೆಹಲಿ/ಜಮ್ಮು: ಮುಂದಿನ ದಿನಗಳಲ್ಲಿ ಗಡಿ ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಪಾಕ್ ಉಗ್ರರು ಸುಲಭವಾಗಿ ಒಳ ನುಸುಳಲು ಸಾಧ್ಯವಿಲ್ಲ.
ಇಸ್ರೇಲ್, ಸಿಂಗಾಪುರಗಳಲ್ಲಿ ಬಳಸುವ ಸ್ಮಾರ್ಟ್ ಫೆನ್ಸಿಂಗ್ ತಂತ್ರಜ್ಞಾನವನ್ನು ಗಡಿಯಲ್ಲಿ ಬಳಸಲು ಬಿಎಸ್‌ಎಫ್ ಮುಂದಾಗಿದೆ. ಅದಕ್ಕಾಗಿ 4,500 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಜಮ್ಮು ವಲಯದ ಬಸಂತಾರ್ ನದಿ ಪ್ರದೇಶ, ಬೀನ್ ನಾಲಾ, ಕರೋಲ್ ಕೃಷ್ಣಾ ಮತ್ತು ಪಲೋಲನಲ್ಲಾಗಳಲ್ಲಿ ಲೇಸರ್ ವಾಲ್‌ಗಳನ್ನು ಅಳವಡಿಸಲಾಗಿದೆ.
ಇದರ ಜತೆಗೆ ಲೇಸರ್ ಗೈಡಡ್ ಮತ್ತು ಉಷ್ಣತೆಯ ಆಧಾರದ ರಾಡಾರ್‌ಗಳನ್ನೂ ಗಡಿ ಪ್ರದೇಶಗಳಲ್ಲಿ ಅಳವಡಿಸಲು ಮುಂದಾಗಿದೆ.
Advertisement