
ಇಂದೋರ್: ಇಂದೋರ್ನ ಮೃಗಾಲಯದಲ್ಲಿ ಸರ್ಪ ದಾಳಿಗೆ ಬಿಳಿ ಹುಲಿಯೊಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃಗಾಲಯದಲ್ಲಿನ ಬಿಳಿ ಹುಲಿಯ ಬೋನಿಗೆ ಇಂದು ಬೆಳಗ್ಗೆ ಹಾವೊಂದು ನುಗ್ಗಿದೆ. ಈ ವೇಳೆ ಹುಲಿ ಹಾವನ್ನು ಕಚ್ಚಲು ಮುಂದಾಗಿದೆ. ಈ ನಡುವೆ ಹಾವು ಮತ್ತು ಹುಲಿಯ ನಡುವೆ ಸಂಘರ್ಷ ಏರ್ಪಟ್ಟಿದೆ. ಕೆಲ ನಿಮಿಷಗಳ ಹೋರಾಟದ ಬಳಿಕ ಹಾವಿನ ವಿಷ ಹೇರಿ ಹುಲಿ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಹಾವು ಸಹ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಹುಲಿಯನ್ನು ರಾಜನ್ ಎಂದು ಗುರುತಿಸಲಾಗಿದ್ದು, ವಂಶಾವಳಿ ವೃದ್ಧಿಗಾಗಿ ಬಿಲಾಸ್ಪುರ್ ಮೃಗಾಲಯದಿಂದ ಕರೆತರಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement