ಬೆದರಿಕೆ ಇಮೇಲ್ ಸಂದೇಶ ಕಳುಹಿಸಿದ್ದ ವ್ಯಕ್ತಿಯ ಬಂಧನ

ಐಪಿ ವಿಳಾಸದ ಮೂಲಕ ಜೈಪುರದ ಸೈಬರ್ ಕೆಫೆಯೊಂದರಲ್ಲಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ...
ಸೈಬರ್ ಕೆಫೆಯಲ್ಲಿ ವ್ಯಕ್ತಿಯ ಬಂಧನ
ಸೈಬರ್ ಕೆಫೆಯಲ್ಲಿ ವ್ಯಕ್ತಿಯ ಬಂಧನ

ಜೈಪುರ: ರಾಜಸ್ಥಾನದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸುವುದಾಗಿ ರಾಜಸ್ಥಾನ ಸಚಿವರಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಸುಶೀಲ್ ಚೌಧರಿ ಎಂಬಾತ ಇತ್ತೀಚೆಗಷ್ಟೇ ರಾಜಸ್ಥಾನದ 16 ಮಂದಿ ಸಚಿವರಿಗೆ, ರಾಜಸ್ಥಾನದಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿ ಇಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಿದ್ದನು.

ಈ ಕುರಿತು ತನಿಖೆ ನಡೆಸಿದ ಭಯೋತ್ಪಾದಕ ನಿಗ್ರಹ ದಳ ಪೊಲೀಸರು, ಆರೋಪಿಗಾಗಿ ಜಾಲ ಬೀಸಿದ್ದರು. ಗೂಗಲ್ ಸಹಾಯದೊಂದಿಗೆ ಇಮೇಲ್ ಕಳುಹಿಸಿದ್ದ ಸಂದೇಶಕ್ಕೆ ಆತ ಬಳಸಿದ್ದ ಐಪಿ ವಿಳಾಸ ಪಡೆಯಲಾಗಿತ್ತು. ಐಪಿ ವಿಳಾಸದ ಮೂಲಕ ಜೈಪುರದ ಸೈಬರ್ ಕೆಫೆಯೊಂದರಲ್ಲಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆತ ಯಾವುದೇ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟುಹೊಂದಿಲ್ಲ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ಭಯೋತ್ಪಾದಕ ಕೃತ್ಯ ನಡೆಸುವ ಕುರಿತು ಬೆದರಿಕೆ ಇಮೇಲ್ ಸಂದೇಶ ಕಳುಹಿಸಿದ್ದ ಹಿನ್ನಲೆಯಲ್ಲಿ ರಾಜಸ್ಥಾನದ್ಯಂತ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿತ್ತು. ಈತನ ಬಂಧನದ ಬಳಿಕ ಸಾರ್ವಜನಿಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com