ಡೈರೆಕ್ಟರ್ ಸ್ಥಾನಕ್ಕೆ ಕುತ್ತು ತಂದ ಸಂಬಳ, ಭೂವಿವಾದ

ಐಐಟಿ ದೆಹಲಿಯ ನಿರ್ದೇಶಕ ರಘುನಾಥ್ ಕೆ.ಶೆವ್‌ಗಾಂವ್ಕರ್ ರಾಜಿನಾಮೆ ವಿಚಾರ ಈಗ...
ರಘುನಾಥ್ ಕೆ.ಶೆವ್‌ಗಾಂವ್ಕರ್ ಮತ್ತು ಸಚಿನ್ ತೆಂಡೂಲ್ಕರ್
ರಘುನಾಥ್ ಕೆ.ಶೆವ್‌ಗಾಂವ್ಕರ್ ಮತ್ತು ಸಚಿನ್ ತೆಂಡೂಲ್ಕರ್
Updated on

ನವದೆಹಲಿ: ಐಐಟಿ ದೆಹಲಿಯ ನಿರ್ದೇಶಕ ರಘುನಾಥ್ ಕೆ.ಶೆವ್‌ಗಾಂವ್ಕರ್ ರಾಜಿನಾಮೆ ವಿಚಾರ ಈಗ ವಿವಾದಕ್ಕೆ ಎಡೆಮಾಡಿದೆ. ಇದೀಗ ಪದತ್ಯಾಗದ ಬೆಳವಣಿಗೆ ಎರಡು ವಿಚಾರಗಳತ್ತ ಥಳಕು ಹಾಕಿಕೊಂಡಿದೆ. ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿಗೆ ನೀಡಬೇಕಾಗಿದ್ದ 70 ಲಕ್ಷ ಗೌರವ ಧನ ಪಾವತಿ ಮತ್ತು ಮಾಜಿ ಕ್ರಿಕೆಟಿಗ, ರಾಜ್ಯ ಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಸ್ಥಾಪಿಸಲು ಉದ್ದೇಶಿದ್ದರು ಎನ್ನಲಾಗಿದ್ದ ಕ್ರಿಕೆಟ್ ಅಕಾಡೆಮಿಗೆ ಜಮೀನು ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೋಪಗೊಂಡು ರಾಜಿನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒತ್ತಡವಿತ್ತು?
ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ 1972 ರಿಂದ 1991 ರಲ್ಲಿ ಐಐಟಿ ದೆಹಲಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಈ ಅವಧಿಯ ವೇತನವನ್ನು ಡಾ.ಸ್ವಾಮಿಗೆ ನೀಡಲಾಗಿರಲಿಲ್ಲ. ಅದನ್ನು ಬಿಡುಗಡೆ ಮಾಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಿಂದ ಸತತ ಒತ್ತಡ ಹೇರಲಾಗುತ್ತಿತ್ತು ಎಂದು ಹೇಳಲಾಗಿದೆ.

ಡಾ.ಸ್ವಾಮಿ ಕೂಡ ಶೇ.18ರ ಬಡ್ಡಿ ದರದಲ್ಲಿ ತಮಗೆ ನೀಡಬೇಕಾಗಿದ್ದ ಸಂಬಳವನ್ನು ನೀಡುವಂತೆ ಐಐಟಿ ದೆಹಲಿ ಆಡಳಿತ ವರ್ಗಕ್ಕೆ ಒತ್ತಾಯ ಮಾಡುತ್ತಿದ್ದರು. ಕಳೆದ ವರ್ಷ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೋದಿ ಸರ್ಕಾರ ಅಧಿಕಾರಕ್ಕೇರುತ್ತಲೇ ಡಾ.ಸ್ವಾಮಿ ಮತ್ತೆ ತಮ್ಮ ಸಂಬಳದ ವಿಚಾರ ಪ್ರಸ್ತಾಪಿಸಿದ್ದರು. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಬಗ್ಗೆ ಸಿಬ್ಬಂದಿ ಖಾತೆಯ ಸಲಹೆ ಕೇಳಿತ್ತು. 1972 ಅವರಿಗೆ ನೀಡಿದ್ದ ವಿಶೇಷ ರಜೆ ಸರ್ಕಾರಿ ರಜೆ ಮತ್ತು ಅವರ ಪ್ರಕರಣ ಸಾಮಾನ್ಯ ಸರ್ಕಾರಿ ಸೇವೆಗಳ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂದು ಪ್ರಶ್ನಿಸಿತ್ತು.

ಇದರ ಜತೆಗೆ ಮಾನವ ಸಂಪನ್ಮೂಲ ಸಚಿವಾಲಯ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಿತ್ತು. ಆದರೆ ರಘುನಾತ್ ಕೆ.ಶೆವ್‌ಗಾಂವ್ಕರ್ ಮಾತ್ರ ಕೋರ್ಟಲ್ಲಿ ಕಾನೂನು ಹೋರಾಟ ಮುಂದುವರಿಸುವ ಇರಾದೆ ವ್ಯಕ್ತಪಡಿಸಿದ್ದರು.

ಭೂಮಿ ಕೇಳಿಲ್ಲ
ಐಐಟಿ ದೆಹಲಿ ನಿರ್ದೇಶಕರ ರಾಜಿನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ತೆಂಡೂಲ್ಕರ್ 'ಕ್ರಿಕೆಟ್ ಅಕಾಡೆಮಿ ಸ್ಥಾಪನೆ ಮಾಡುವ ವಿಚಾರವನ್ನೇ ನಾನು ಯೋಚಿಸಿಲ್ಲ. ಮಾತ್ರವಲ್ಲದೇ ನನ್ನ ಯಾವುದೇ ಯೋಜನೆಗಾಗಿ ಐಐಟಿ ದೆಹಲಿ ಆಡಳಿತ ವರ್ಗದ ಬಳಿ ಜಮೀನು ಕೇಳಿಯೇ ಇಲ್ಲ. ವಿವಾದದಲ್ಲಿ ನನ್ನ ಹೆಸರನ್ನು ಎಳೆದು ತಂದದ್ದು ಆಘಾತ ಮತ್ತು ಅಚ್ಚರಿ ತಂದಿದೆ. ಮಾಧ್ಯಮಗಳು ಅಕಾಡೆಮಿ ಸ್ಥಾಪನೆ ಬಗ್ಗೆ ನನ್ನ ಬಳಿ ಸ್ಪಷ್ಟನೆ ಕೇಳಬಹುದಿತ್ತು. ನಂತರ ವರದಿ ಪ್ರಕಟಿಸಬಹುದಿತ್ತು' ಎಂದಿದ್ದಾರೆ.

ಅಂಥದ್ದೇನೂ ನಡೆದಿಲ್ಲ
ಇದೇ ವೇಳೆ ಬೆಳವಣಿಗೆ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವಾಲಯ ಶೆವ್‌ಗಾಂವರ್ ಮೇಲೆ ಒತ್ತಡ ಹೇರಲಾಗಿಲ್ಲ. ತೆಂಡೂಲ್ಕರ್ ಅಕಾಡೆಮಿ ಸ್ಥಾಪನೆ ಸಂಬಂಧ ಜಮೀನನ್ನೂ ಕೇಳಿಲ್ಲ ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com