ದೇಶ
೩೧ರ ರಾತ್ರಿ ಮಹಿಳೆಯರ ಸುರಕ್ಷತೆಗೆ ಶಿವಸೇನೆ ಸಂಚಾರಿ ದಳ ಸಜ್ಜು
ತನ್ನ ಪಕ್ಷಕ್ಕೆ ಸೇರಿದ ಆಟೋ ರಿಕ್ಷಾಗಳು ಮತ್ತು ಕ್ಯಾಬ್ ಗಳಿಗೆ...
ಮುಂಬೈ: ತನ್ನ ಪಕ್ಷಕ್ಕೆ ಸೇರಿದ ಆಟೋ ರಿಕ್ಷಾಗಳು ಮತ್ತು ಕ್ಯಾಬ್ ಗಳಿಗೆ, ೩೧ರಾತ್ರಿ ಹೊಸ ವರ್ಷದ ಸಮಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಶಿವಸೇನೆ ಪಕ್ಷ ಸೂಚಿಸಿದೆ.
ಮುಂಬೈನಲ್ಲಿ 'ಶಿವ ವಾಹ್ತುಕ್ ಸೇನಾ'ಗೆ ಒಳಪಟ್ಟ 16000 ಆಟೊ ರಿಕ್ಷಾಗಳು, ೧೦೦೦೦ ಟ್ಯಾಕ್ಸಿಗಳು ಡೆಸೆಂಬರ್ ೩೧ ರಾತ್ರಿ ನಾವು ತಿಳಿಸಿರುವ ನಿಯಮಗಳನ್ನು ಪಾಲಿಸಲಿದ್ದಾರೆ. "ಹೊಸ ವರ್ಷದ ಆಚರಣೆಯ ನಂತರ ರಿಕ್ಷಾಗಳನ್ನು ಮತ್ತು ಟ್ಯಾಕ್ಸಿಗಳನ್ನು ಬಾಡಿಗೆ ಪಡೆಯುವ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ತಲಪಿಸುವುದು ಚಾಲಕರ ಕರ್ತವ್ಯ ಎಂದು ಸೂಚಿಸಿದ್ದೇವೆ" ಎಂದು ಶಿವಸೇನಾ ಪಕ್ಷದ ಸಂಚಾರಿ ದಳ ಶಿವ ವಾಹ್ತುಕ್ ಸೇನಾದ ಅಧ್ಯಕ್ಷ ಹಾಜಿ ಅರಾಫತ್ ಶೇಕ್ ತಿಳಿಸಿದ್ದಾರೆ.
ಸಮಾಜ ವಿರೋಧಿ ಜನರ ಬಗ್ಗೆ ಕಣ್ಣಿಟ್ಟು ಅಂತಹವರನ್ನು ಕೂಡಲೆ ಪೊಲೀಸರಿಗೆ ಹಿಡಿದುಕೊಡಬೇಕೆಂದು ತಿಳಿಸಿದ್ದೇವೆ ಎಂದು ಶೇಕ್ ತಿಳಿಸಿದ್ದಾರೆ.