ಏರ್ ಏಷ್ಯಾ ದುರಂತ: ಸಮುದ್ರದಿಂದ 40 ಮೃತದೇಹ ಹೊರಕ್ಕೆ

ಏರ್ ಏಷ್ಯಾ ದುರಂತ: ಸಮುದ್ರದಿಂದ 40 ಮೃತದೇಹ ಹೊರಕ್ಕೆ

ಜಕಾರ್ತ: ನಿಗೂಢವಾಗಿ ಕಣ್ಮರೆಯಾಗಿದ್ದ ಏರ್ ಏಷ್ಯಾ ವಿಮಾನದ ಕೆಲವು ಅವಶೇಷಗಳು ಹಾಗೂ 40ಕ್ಕೂ ಹೆಚ್ಚು ಶವಗಳನ್ನು ಜಾವಾ ಸಮುದ್ರದಿಂದ ಹೊರಕ್ಕೆ ತೆಗೆಯಲಾಗಿದೆ.

ಜಾವಾ ಸಮುದ್ರದಲ್ಲಿ ವಿಮಾನದ ಅವಶೇಷಗಳು ಹಾಗೂ ಮೃತದೇಹಗಳು ಸಿಕ್ಕಿವೆ ಎಂದು ಮಂಗಳವಾರ ಇಂಡೋನೇಷ್ಯಾದ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾತ್ರಾ ಮತ್ತು ಬರ್ನಿಯೋ ದ್ವೀಪಗಳ ನಡುವಿನ ಜಾವ ಸಮುದ್ರದಲ್ಲಿ ಅವಶೇಷವೊಂದು ಪತ್ತೆಯಾಗಿದೆ ಎಂದು ಇಂಡೋನೇಷ್ಯಾದ ಶೋಧ ಕಾರ್ಯಾಚರಣೆ ತಂಡದ ಮುಖ್ಯಸ್ಥ ಸೋಯಿಲಿಸ್ಟಿಯೋ ಹೇಳಿದ್ದಾರೆ. ಪತ್ತೆಯಾಗಿರುವ ಅವಶೇಷಗಲು ಏರ್ ಏಷ್ಯಾ ವಿಮಾನದ್ದೇ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಶೋಧ ಕಾರ್ಯ ಮುಂದುವರಿಸಿರುವುದಾಗಿ ತಿಳಿಸಿದ್ದಾರೆ.

ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುತ್ತಿದ್ದ ಏರ್‌ ಏಷ್ಯಾದ ಕ್ಯುಝಡ್‌8501 ವಿಮಾನ ಭಾನುವಾರ ಟೇಕಾಫ್ ಆದ 42 ನಿಮಿಷದಲ್ಲಿ ಸಂಪರ್ಕ ಕಡಿದುಕೊಂಡಿತ್ತು. ಈ ವಿಮಾನದ ಶೋಧಕ್ಕಾಗಿ ಸೋಮವಾರ ನಡೆದ ಕಾರ್ಯಾಚರಣೆ ವೇಳೆ ಇಂಡೋನೇಷ್ಯಾ ಹೆಲಿಕಾಪ್ಟರ್‌ವೊಂದು ಜಾವಾ ಬಳಿ ಸಮುದ್ರದಲ್ಲಿ ಎರಡು ತೈಲ ಕಲೆಗಳನ್ನು ಪತ್ತೆ ಮಾಡಿತ್ತು.

ಮುಗಿಲು ಮುಟ್ಟಿದ ಕುಟಂಬಸ್ಥರ ಆಕ್ರಂದನ
ಜಾವಾ ಸಮುದ್ರದಲ್ಲಿ ಏರ್ ಏಷ್ಯಾ ವಿಮಾನ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭಿಸುತ್ತಿದ್ದಂತೆ ಮೃತ ಪ್ರಯಾಣಿಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಮುದ್ರದಿಂದ ಮೃತದೇಹಗಳನ್ನು ಹೊರತೆಗೆಯುತ್ತಿರುವ ದೃಶ್ಯಗಳು ವೀಕ್ಷಿಸಿದ ಕುಟುಂಬಸ್ಥರ ಕಣ್ಣೀರು ಕಟ್ಟೆ ಹೊಡೆಯಿತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com