ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ ನಿವೃತ್ತಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಡಾ.ಕೆ ರಾಧಾಕೃಷ್ಣನ್ ಅವರು ಬುಧವಾರ ನಿವೃತ್ತಿಯಾಗಿದ್ದಾರೆ.
ನಿವೃತ್ತ ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ (ಸಂಗ್ರಹ ಚಿತ್ರ)
ನಿವೃತ್ತ ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ (ಸಂಗ್ರಹ ಚಿತ್ರ)

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಡಾ.ಕೆ ರಾಧಾಕೃಷ್ಣನ್ ಅವರು ಬುಧವಾರ ನಿವೃತ್ತಿಯಾಗಿದ್ದಾರೆ.

ಚಂದ್ರಯಾನ ಮತ್ತು ಮಂಗಳಯಾನ ಖ್ಯಾತಿಯ ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ ಅವರು ಇಂದು ತಮ್ಮ ಸ್ಥಾನದಿಂದ ನಿವೃತ್ತಿಯಾಗಿದ್ದಾರೆ. ಅಕ್ಟೋಬರ್ 30 2009ರಂದು ಇಸ್ರೋ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಧಾಕೃಷ್ಣನ್ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವಂತೆ ಮಾಡಿದರು. ಇತ್ತೀಚೆಗಷ್ಟೇ ಮಾನವ ಸಹಿತ ಸಾಮರ್ಥ್ಯವಿರುವ ವ್ಯೋಮನೌಕೆಯನ್ನು ಯಶಸ್ವಿಯಾಗಿ ಪ್ರಯೋಗ ಮಾಡುವ ಮೂಲಕ ಮಾನವ ಸಹಿತ ವ್ಯೋಮನೌಕೆ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಯಿತು.

ಇಸ್ರೋ ಅಧ್ಯಕ್ಷರಾಗಿ ರಾಧಾಕೃಷ್ಣನ್ ಅವರಿಗೆ ಇಂದು ಕೊನೆಯ ದಿನವಾಗಿದ್ದು, ಸಹೋಧ್ಯೋಗಿಗಳಿಂದ ಹೃದಯಸ್ಪರ್ಶಿ ವಿದಾಯ ನೀಡಲಾಗಿದೆ. ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿಯಾಗಿರುವ ಶೈಲೇಶ್ ನಾಯಕ್ ಅವರು ಮುಂದಿನ ಇಸ್ರೋ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com