ಪಾಕಿಸ್ತಾನಕ್ಕೆ ತಕ್ಕ ಉತ್ತರ: ಪರಿಕ್ಕರ್

ಕದನ ವಿರಾಮ ಉಲ್ಲಂಘನೆ ಹಿನ್ನಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (ಸಂಗ್ರಹ ಚಿತ್ರ)
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (ಸಂಗ್ರಹ ಚಿತ್ರ)

ನವದೆಹಲಿ: ಗಡಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಕಿಡಿಕಾರಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಮನೋಹರ್ ಪರಿಕ್ಕರ್ ಅವರು, ಪಾಕಿಸ್ತಾನ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಗಡಿಯಲ್ಲಿ ಮತ್ತೇನಾದರೂ ಅವಘಡ ಸಂಭವಿಸಿದರೆ ಖಂಡಿತವಾಗಿಯೂ ಸೇನಾಪಡೆಯನ್ನು ದ್ವಿಗುಣ ಮಾಡಲಾಗುತ್ತದೆ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

'ನಾನು ಸೈನಿಕರಿಗೆ ಹೇಳುವುದೊಂದೇ, ಭಾರತವನ್ನು ಕೆಣಕಿದರೆ ದೃತಿಗೆಡಬೇಡಿ, ಅವರದೇ (ಪಾಕಿಸ್ತಾನ)ಶೈಲಿಯಲ್ಲಿ ಉತ್ತರಿಸಿ. ಗಡಿಯಲ್ಲಿ ಏನಾದರೂ ಅವಘಡ ಸಂಭವಿಸಿದರೆ ಸೇನೆಯನ್ನು ದ್ವಿಗುಣಗೊಳಿಸಿ ಹೋರಾಟ ಮಾಡಿ ಎಂದು ಪರಿಕ್ಕರ್ ಹೇಳಿದ್ದಾರೆ. ಅಲ್ಲದೆ ಶಸ್ತ್ರಾಸ್ತ್ರಗಳಿಗಿಂತಲೂ ಸೈನಿಕರು ಮುಖ್ಯ' ಎಂದು ಪರಿಕ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಲ್ಲನ್‌ವಾಲಾ ಸೆಕ್ಟರ್‌ನಲ್ಲಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧನೋರ್ವ ಗಾಯಗೊಂಡಿದ್ದ. ಇನ್ನು ಸಾಂಬಾ ಸೆಕ್ಟರ್‌ನಲ್ಲಿ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು, ಮತ್ತೋರ್ವ ಯೋಧ ಗಾಯಗೊಂಡಿದ್ದಾನೆ. ಇತ್ತೀಚಿನ ಕೆಲ ತಿಂಗಳಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ ಹೆಚ್ಚಾಗಿದ್ದು, ಕಳೆದ ಅಕ್ಬೋಬರ್‌ನಿಂದ ಇಲ್ಲಿಯವರೆಗೂ ಸುಮಾರು 20 ನಾಗರೀಕರು ಸಾವನ್ನಪ್ಪಿದ್ದಾರೆ.

ಪಾಕ್‌ಗೆ ತಕ್ಕ ಉತ್ತರ: ನಾಲ್ಕು ಪಾಕ್ ಸೈನಿಕರ ಸಾವು
ಸಾಂಬಾ ಸೆಕ್ಟರ್‌ನಲ್ಲಿ ಇಂದು ಸತತ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ನಾಲ್ಕು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಾಂಬಾ ಸೆಕ್ಟರ್‌ನಲ್ಲಿರುವ ಭಾರತೀಯ ಯೋಧರ ಬಿಡಾರದ ಮೇಲೆ ಪಾಕಿಸ್ತಾನಿ ಯೋಧರು ದಿಢೀರ್ ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ಕು ಮಂದಿ ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ ಎಂದು ಎಂದು ತಿಳಿದುಬಂದಿದೆ. ಭಾರತೀಯ ಸೈನಿಕರ ಸತತ ಗುಂಡಿನ ದಾಳಿಯನ್ನು ತಾಳಲಾಗದ ಪಾಕಿಸ್ತಾನ ಸೈನಿಕರು ಬಿಳಿಬಾವುಟ ಪ್ರದರ್ಶಿಸಿದ್ದು, ಸಾವಿಗೀಡಾದ ಯೋಧರ ದೇಹವನ್ನು ತೆರವುಗೊಳಿಸಲು ಸಮಯಾವಕಾಶ ಕೇಳಿದಾಗ ಭಾರತೀಯ ಯೋಧರು ಗುಂಡಿನ ದಾಳಿಯನ್ನು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com