ಘೇಂಡಾಮೃಗವನ್ನು ಕೊಂದ ಕಳ್ಳ ಬೇಟೆಗಾರರು!

ಸೋನಿತ್‌ಪುರ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ...
ಘೇಂಡಾಮೃಗ
ಘೇಂಡಾಮೃಗ

ಸೋನಿತ್‌ಪುರ/ಅಸ್ಸಾಂ: ಸೋನಿತ್‌ಪುರ್ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗವನ್ನು ಕಳ್ಳ ಬೇಟೆಗಾರರು ಬುಧವಾರ ಬೆಳಗ್ಗೆ ಗುಂಡಿಟ್ಟು ಕೊಂದಿದ್ದಾರೆ.

ನಾಲ್ಕು ಮಂದಿ ಕಳ್ಳ ಬೇಟೆಗಾರರು ಇಂದು ಬೆಳಗ್ಗೆ 2.45ರ ಸುಮಾರಿಗೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗವನ್ನು ಕೊಂದಿದ್ದಾರೆ. ಈ ವೇಳೆ ಅಲ್ಲೇ ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಕಳ್ಳ ಬೇಟೆಗಾರರ ಮೇಲೆ ಗುಂಡು ಹಾರಿಸಿದ್ದಾರೆ. ಈ ಗುಂಡಿನ ಸಂಘರ್ಷದಲ್ಲಿ ಓರ್ವ ಅರಣ್ಯ ಸಿಬ್ಬಂದಿ ಮೃತಪಟ್ಟಿದ್ದಾನೆ.

ಮೃತ ಅರಣ್ಯ ಸಿಬ್ಬಂದಿಯನ್ನು 28 ವರ್ಷದ ಸುಶೀಲ್ ಸಿಯಲ್ ಎಂದು ಗುರುತಿಸಲಾಗಿದೆ. ಸುಶೀಲ್ ಸುಮಾರು 4 ವರ್ಷಗಳಿಂದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಾನವನದ ನಾಲ್ಕು ಕಿ.ಮೀ ದೂರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ.

ಕಳ್ಳ ಬೇಟೆಗಾರರು ಸ್ಥಳದಿಂದ ದೌಡಾಯಿಸಿದ್ದು, ಅವರು ಬಳಸುತ್ತಿದ್ದ ಎಂಕೆ1.303 ರೈಫಲ್ ಹಾಗೂ ಒಂದು ಪಿಸ್ತೂಲನ್ನು ಅರಣ್ಯ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.

ಅಳಿವಿನ ಅಂಚಿನಲ್ಲಿರುವ ಒಂಟಿ ಕೊಂಬಿನ ಘೇಂಡಾಮೃಗಗಳಿಗೆ ಅಸ್ಸಾಂ ರಕ್ಷಿತಾರಣ್ಯವಾಗಿದೆ. ಅತಿದೊಡ್ಡ ಜನಸಂಖ್ಯೆಯಲ್ಲಿ ಘೇಂಡಾಮೃಗಗಳು ಇಲ್ಲಿ ವಾಸವಾಗಿವೆ. ಆದರೆ ಕಳ್ಳ ಬೇಟೆಗಾರರ ಹಾವಳಿಯಿಂದಾಗಿ ಘೇಂಡಾಮೃಗಗಳ ಜೀವಕ್ಕೆ ಕುತ್ತಾಗಿದೆ. ಅಸ್ಸಾಂನಾದ್ಯಂತ ಇಲ್ಲಿಯವರೆಗೂ 200 ಒಂಟಿ ಕೊಂಬಿನ ಘೇಂಡಾಮೃಗಗಳನ್ನು ಮೃತಪಟ್ಟಿದ್ದಾರೆ. ಇದೇ ವರ್ಷದಲ್ಲಿ 20 ಘೇಂಡಾಮೃಗಗಳು ಕಳ್ಳ ಬೇಟೆಗಾರರ ಕ್ರೌರ್ಯಕ್ಕೆ ಬಲಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com