• Tag results for ಅಸ್ಸಾಂ

ಆಫ್ರಿಕನ್ ಸ್ವೈನ್ ಫೀವರ್ ನಂತರ ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ!

ಅಸ್ಸಾಂ ನಲ್ಲಿ ಹಸುಗಳಿಗೆ ವಿಲಕ್ಷಣ ಚರ್ಮ ರೋಗ  ಹರಡುತ್ತಿರುವುದು ಪತ್ತೆಯಾಗಿದೆ. 

published on : 27th August 2020

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಗೆ ಕೊರೋನಾ ಪಾಸಿಟಿವ್

ತಾವು ಕೊರೋನಾ ಸೋಂಕಿಗೆ ಒಳಗಾಗಿರುವುದಾಗಿ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಹೇಳಿದ್ದಾರೆ. ತಮ್ಮ ಸಂಪರ್ಕಕ್ಕೆ ಇತ್ತೀಚೆಗೆ ಬಂದಿರುವ ಎಲ್ಲರೂ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ನನಗೆ ಸೋಂಕು ತಗಲಿರುವುದು ಪತ್ತೆಯಾಗಿದೆ ಎಂದು ಗೊಗೊಯ್ ಹೇಳಿದ್ದಾರೆ.

published on : 26th August 2020

ದೇಶದ ಅತೀ ದೊಡ್ಡ ನದಿ ಮೇಲಿನ ರೋಪ್ ವೇ ಅಸ್ಸಾಂನಲ್ಲಿ ಲೋಕಾರ್ಪಣೆ

ಭಾರತ ದೇಶದ ಅತೀ ದೊಡ್ಡ ನದಿ ಮೇಲಿನ ರೋಪ್ ವೇಯನ್ನು ಅಸ್ಸಾಂನಲ್ಲಿ ಇಂದು ಉದ್ಘಾಟನೆ ಮಾಡಲಾಯಿತು. 

published on : 24th August 2020

ನಾನು ರಾಜಕಾರಣಿಯಲ್ಲ, ಅಸ್ಸಾಂ ಬಿಜೆಪಿ ಸಿಎಂ ಅಭ್ಯರ್ಥಿಯೂ ಅಲ್ಲ: ನಿವೃತ್ತ ಸಿಜೆಐ ರಂಜನ್ ಗೊಗೊಯ್

ಮುಂಬರುವ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯ ವಿಚಾರವಾಗಿ ಎದ್ದಿರುವ ಊಹಾಪೋಹಗಳಿಗೆ ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಸ್ಪಷ್ಟನೆ ನೀಡಿದ್ದಾರೆ.

published on : 23rd August 2020

"ರಂಜನ್ ಗೊಗೊಯಿ ಬಿಜೆಪಿಯ ಅಸ್ಸಾಂ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ"

ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಅಸ್ಸಾಂನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅಸ್ಸಾಂ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ ಭವಿಷ್ಯ ನುಡಿದಿದ್ದಾರೆ.

published on : 23rd August 2020

ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ ಒಂದು ಕೋಟಿ ರೂ. ನೀಡಿದ ನಟ ಅಕ್ಷಯ್ ಕುಮಾರ್

ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಂದು ಕೋಟಿ ರೂಪಾಯಿ ನೀಡಿದ್ದಾರೆ.

published on : 20th August 2020

ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರ ದಾಳಿ: 3 ಭಾರತೀಯ ಯೋಧರು ಹುತಾತ್ಮ

ಮಾಯನ್ಮಾರ್ ಗಡಿಯಲ್ಲಿನ ನಾಲ್ಕನೇ ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರರು ದಾಳಿ ನಡೆಸಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.

published on : 30th July 2020

ಅಸ್ಸಾಂ ಪ್ರವಾಹದಲ್ಲಿ 129 ವನ್ಯಮೃಗಗಳ ಸಾವು, ಕಾಜಿರಂಗ ಅರಣ್ಯ ಜಲಾವೃತ!

ಅಸ್ಸಾಂನಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಕಾಜಿರಂಗ ಹುಲಿ ಸಂರಕ್ಷಿತಾರಣ್ಯ ಬಹುತೇಕ ನೀರಿನಲ್ಲಿ ಮುಳುಗಿದ್ದು, ಪರಿಣಾಮ ಪ್ರವಾಹದಲ್ಲಿ ಈ ವರೆಗೂ 129 ವನ್ಯಮೃಗಗಳು ಸಾವನ್ನಪ್ಪಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

published on : 26th July 2020

ಅಸ್ಸಾಂನಲ್ಲಿ ಪ್ರವಾಹಕ್ಕೆ ಮತ್ತೊಬ್ಬ ಬಲಿ, ಸಾವಿನ ಸಂಖ್ಯೆ 97ಕ್ಕೆ ಏರಿಕೆ

ಅಸ್ಸಾಂನಲ್ಲಿ 26 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿರುವುದರ ನಡುವೆ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ.

published on : 26th July 2020

ಅಸ್ಸಾಂನಲ್ಲಿ ಭೀಕರ ಪ್ರವಾಹ: ನೆರವು ನೀಡಲು ಸಿದ್ಧ- ವಿಶ್ವಸಂಸ್ಥೆ

ಅಸ್ಸಾಂ ಭೀಕರ ಪ್ರವಾಹದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅಪಾರ ಮೌಲ್ಯದ ಆಸ್ತಿ ಪಾಸ್ತಿ ಉಂಟಾಗಿದ್ದು, ಅಗತ್ಯ ಬಿದ್ದರೆ ಭಾರತ ಸರ್ಕಾರಕ್ಕೆ ನೆರವು ನೀಡಲು ಸಿದ್ಧವಿರುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರರೊಬ್ಬರು ತಿಳಿಸಿದ್ದಾರೆ.

published on : 21st July 2020

ಅಸ್ಸಾಂ ರಾಜಭವನದಲ್ಲಿ 70 ಕೋವಿಡ್ -19 ಕೇಸ್ ಗಳು ಪತ್ತೆ

ಅಸ್ಸಾಂ ರಾಜಭವನದಲ್ಲಿ  70 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಈಗಾಗಲೇ ಕಂಟೈನ್ ಮೆಂಟ್ ವಲಯವೆಂದು ಘೋಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ.

published on : 19th July 2020

ಅಸ್ಸಾಂನಲ್ಲಿ ಭೀಕರ ಪ್ರವಾಹ: 30 ಜಿಲ್ಲೆಗಳು ಜಲಾವೃತ, 76 ಮಂದಿ, 96 ಕಾಡು ಪ್ರಾಣಿಗಳ ಸಾವು

ಅಸ್ಸಾಂನಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಈ ವರೆಗೂ 76 ಮಂದಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಪ್ರವಾಹದ ಹೊಡೆತಕ್ಕೆ 96 ಕಾಡು ಪ್ರಾಣಿಗಳೂ ಕೂಡ ಸಾವನ್ನಪ್ಪಿವೆ.

published on : 19th July 2020

ಅಸ್ಸಾಂ ಪ್ರವಾಹಕ್ಕೆ ಎಚ್.ಡಿ. ದೇವೇಗೌಡ ಕಳವಳ; ನೆರವಿಗೆ ಧಾವಿಸುವಂತೆ ಕೇಂದ್ರಕ್ಕೆ ಮನವಿ

ಅಸ್ಸಾಂನಲ್ಲಿ ಪ್ರವಾಹದಿಂದಾಗಿರುವ ಅನಾಹುತಗಳಿಂದ ತೀವ್ರವಾಗಿ ನೊಂದಿರುವುದಾಗಿ ಮಾಜಿ ಪ್ರಧಾನಿ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದು, ಅಸ್ಸಾಂನಲ್ಲಿ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಿ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

published on : 17th July 2020

ಅಸ್ಸಾಂನಲ್ಲಿ ಭಾರೀ ಮಳೆ: ಅಣೆಕಟ್ಟು ಒಡೆದು ಗ್ರಾಮಗಳು ಜಲಾವೃತ; ಬ್ರಹ್ಮಪುತ್ರ ನದಿ ನೀರಿನ ಮಟ್ಟದಲ್ಲಿ ಏರಿಕೆ

ನಿರಂತರ ಮಳೆಯಿಂದಾಗಿ ಬ್ರಹ್ಮಪುತ್ರ ನದಿ ನೀರಿನ ಮಟ್ಟದಲ್ಲಿ ಏರಿಕೆ ಉಂಟಾಗಿ ಅಸ್ಸಾಂನ ದುಬ್ರಿ ಜಿಲ್ಲೆಯ ಅಣೆಕಟ್ಟು ಒಡೆದು ಪ್ರವಾಹ ಉಂಟಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

published on : 11th July 2020

ಅಸ್ಸಾಂನಲ್ಲಿ ಕಾಗದ ಕಾರ್ಖಾನೆಗಳು ಬಂದ್‍: ಸಾವಿನ ಸಂಖ್ಯೆ 67 ಕ್ಕೆ ಏರಿಕೆ

ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೇಪರ್ ಕಾರ್ಪೊರೇಶನ್ ಲಿಮಿಟೆಡ್‌ನ ಕ್ಯಾಚರ್ ಪೇಪರ್ ಮಿಲ್ಸ್ ನ ಮತ್ತೊಬ್ಬ ಉದ್ಯೋಗಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಶನಿವಾರ ಮೃತಪಡುವುದರೊಂದಿಗೆ ಕಚಾರ್ ಮತ್ತು ನಾಗಾನ್ ಕಾಗದ ಕಾರ್ಖಾನೆ ನೌಕರರ ಸಾವಿನ ಸಂಖ್ಯೆ 67ಕ್ಕೇರಿದೆ.

published on : 28th June 2020
1 2 3 4 5 6 >