ಕಂತೆ ಕಂತೆ ನೋಟಿನ ಮೇಲೆ ಮಲಗಿದ್ದ ಅಸ್ಸಾಂ ನಾಯಕ, ಫೋಟೋ ವೈರಲ್

ಅಸ್ಸಾಂನ ಲೋಕಸಭೆ ಚುನಾವಣೆಗೆ ಮುನ್ನ ಯುನೈಟೆಡ್ ಪೀಪಲ್ಸ್ ಪಾರ್ಟಿ ಆಫ್ ಲಿಬರಲ್ (UPPL) ಸದಸ್ಯರೊಬ್ಬರು ನೋಟು ಹಿಡಿದು ಮಲಗಿರುವ ಫೋಟೋವನ್ನು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಬೆಂಜಮಿನ್ ಬಾಸುಮತರಿ
ಬೆಂಜಮಿನ್ ಬಾಸುಮತರಿ

ನವದೆಹಲಿ: ಅಸ್ಸಾಂನ ಲೋಕಸಭೆ ಚುನಾವಣೆಗೆ ಮುನ್ನ ಯುನೈಟೆಡ್ ಪೀಪಲ್ಸ್ ಪಾರ್ಟಿ ಆಫ್ ಲಿಬರಲ್ (UPPL) ಸದಸ್ಯರೊಬ್ಬರು ನೋಟು ಹಿಡಿದು ಮಲಗಿರುವ ಫೋಟೋವನ್ನು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.

ಯುಪಿಪಿಎಲ್‌ನ ವಿಲೇಜ್ ಕೌನ್ಸಿಲ್ ಡೆವಲಪ್‌ಮೆಂಟ್ ಕಮಿಟಿ (ವಿಸಿಡಿಸಿ) ಸದಸ್ಯ ಎಂದು ಗುರುತಿಸಲ್ಪಟ್ಟಿರುವ ಬೆಂಜಮಿನ್ ಬಾಸುಮತರಿ ಸಾಂಪ್ರದಾಯಿಕ ಟವೆಲ್ ಅನ್ನು ಮಾತ್ರ ಧರಿಸಿ, 500 ರೂ ನೋಟುಗಳ ಹಾಸಿಗೆಯ ಮೇಲೆ ಮಲಗಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಬೆಂಜಮಿನ್ ಬಾಸುಮತರಿ
ಮುಂದಿನ ವರ್ಷ ಕಾಂಗ್ರೆಸ್ ನ ಆ ದೊಡ್ಡ ನಾಯಕ ಬಿಜೆಪಿ ಸೇರಲಿದ್ದಾರೆ: ಅಸ್ಸಾಂ ಸಿಎಂ ಶರ್ಮಾ

Fact Check ಪ್ರಕಾರ, ಈ ಫೋಟೋ ಹಳೆಯದ್ದಾಗಿದ್ದು ಚುನಾವಣಾ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಹಳೆಯ ಫೋಟೋವನ್ನು ವೈರಲ್ ಮಾಡಲಾಗಿದೆ ಎಂದು ಬಸುಮತರಿಗೆ ಆಪ್ತ ಮೂಲಗಳು ತಿಳಿಸಿವೆ.

ಯುಪಿಪಿಎಲ್ ಈ ಘಟನೆಯಿಂದ ದೂರ ಸರಿದಿದೆ. ವಿಸಿಡಿಸಿ ಹುದ್ದೆಯಿಂದ ಬಾಸುಮತಿಯನ್ನು ಅಮಾನತುಗೊಳಿಸಿ ತೆಗೆದುಹಾಕಿರುವುದನ್ನು ಖಚಿತಪಡಿಸಿದೆ. ಹರಿಸಿಂಗ ಬ್ಲಾಕ್ ಕಮಿಟಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದು, ಜನವರಿ 10ರಂದು ಬಸುಮತಿಯನ್ನು ಅಮಾನತುಗೊಳಿಸಲಾಗಿದೆ ಎಂದು ಯುಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೋರೊ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com