ಭಾರತದ ಒಂದಿಂಚು ಭೂಮಿಯನ್ನೂ ಚೀನಾ ಅತಿಕ್ರಮಿಸಲು ಸಾಧ್ಯವಿಲ್ಲ: Amit Shah

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಚೀನಾ ಒಂದು ಇಂಚು ಭೂಮಿಯನ್ನು ಆಕ್ರಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Amit Shah
ಅಮಿತ್ ಶಾ
Updated on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಚೀನಾ ಒಂದು ಇಂಚು ಭೂಮಿಯನ್ನು ಆಕ್ರಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಸ್ಸಾಂನ ಲಖಿಂಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಗಡಿ ವಿಚಾರದಲ್ಲಿ ಕೇಂದ್ರ ಮೋದಿ ಸರ್ಕಾರ ಸಾಕಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು, ಭಾರತದ ಒಂದಿಂಚು ಭೂಮಿಯನ್ನೂ ಚೀನಾ ಅತಿಕ್ರಮಿಸಲು ಸಾಧ್ಯವಿಲ್ಲ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಬಾಂಗ್ಲಾದೇಶದೊಂದಿಗಿನ ದೇಶದ ಗಡಿಯನ್ನು ಭದ್ರಪಡಿಸಿದೆ ಮತ್ತು ಒಳನುಸುಳುವಿಕೆಯನ್ನು ನಿಲ್ಲಿಸಿದೆ ಎಂದು ಹೇಳಿದರು.

Amit Shah
ಚೀನಾ 34,000 ಚದರ ಕಿಮೀ ಭೂಮಿ ಕಬಳಿಸಿದಾಗ ಅಫೀಮು ಸೇವಿಸಿದವರು ಯಾರು: ಖರ್ಗೆಗೆ ಪ್ರಹ್ಲಾದ್ ಜೋಶಿ ಪ್ರಶ್ನೆ

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು 1962 ಚೀನಾದ ಆಕ್ರಮಣದ ವೇಳೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಕ್ಕೆ ಹೇಗೆ ಬೈ-ಬೈ ಹೇಳಿದರು ಎಂಬುದನ್ನು ಜನರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

'1962 ರ ಚೀನಾದ ಆಕ್ರಮಣದ ಸಮಯದಲ್ಲಿ, ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರೂ ಅವರು ಅಸ್ಸಾಂ ಮತ್ತು ಅರುಣಾಚಲ ಪ್ರದೇಶಕ್ಕೆ 'ಬೈ-ಬೈ' ಹೇಳಿದ್ದರು. ಈ ರಾಜ್ಯಗಳ ಜನರು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ… ಆದರೆ ಈಗ, ಚೀನಾ ನಮ್ಮ ಒಂದು ಇಂಚು ಭೂಮಿಯನ್ನು ಅತಿಕ್ರಮಿಸಲು ಸಾಧ್ಯವಾಗಲಿಲ್ಲ. ಡೋಕ್ಲಾಮ್‌ನಲ್ಲಿಯೂ ನಾವು ಅವರನ್ನು ಹಿಂದಕ್ಕೆ ಅಟ್ಟಿದ್ದೇವೆ.

ಕೇಂದ್ರ ಸರ್ಕಾರ ಮತ್ತು ಅಸ್ಸಾಂ ರಾಜ್ಯದಲ್ಲಿ ಹಿಮಂತ ಬಿಸ್ವಾ ಶರ್ಮಾ ಸರ್ಕಾರ, ಒಳನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ನಿಲ್ಲಿಸಿದೆ. ಅಸ್ಸಾಂನ ಹಿಂದಿನ ಕಾಂಗ್ರೆಸ್ ಸರ್ಕಾರವು ರಾಜ್ಯಕ್ಕೆ ತನ್ನ ದುರ್ಬಲ ಆಡಳಿತದ ಮೂಲಕ ರಾಜ್ಯದ ಜನೆತೆಗೆ "ಅನ್ಯಾಯ" ವನ್ನು ಮಾಡಿದೆ ಮತ್ತು ವಿಭಿನ್ನ ಹಿಂಸಾತ್ಮಕ ಚಳುವಳಿಗಳು ಮತ್ತು ದಂಗೆ-ಸಂಬಂಧಿತ ಘಟನೆಗಳಿಂದ ಕೊಲ್ಲಲ್ಪಟ್ಟ ಹಲವಾರು ಜನರಿಗೆ ಅನ್ಯಾಯವಾಗಿದೆ ಆರೋಪಿಸಿದರು.

Amit Shah
ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳಿಗೆ ಮರುನಾಮಕರಣ: ಚೀನಾ ನಡೆಗೆ ಅಮೇರಿಕಾ ಖಂಡನೆ

ಆದರೆ ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರದ ಅಡಿಯಲ್ಲಿ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸುಮಾರು 9,000 ಬಂಡುಕೋರರು ಶರಣಾಗಿದ್ದಾರೆ. ರಾಜ್ಯದ ಶೇ 80 ರಷ್ಟು ಪ್ರದೇಶಗಳಿಂದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಹಿಂಪಡೆಯಲಾಗಿದೆ. ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈಗ ಮತದಾರರ ಮುಂದೆ ಆಯ್ಕೆಗಳು ಸ್ಪಷ್ಟವಾಗಿದ್ದು, ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟವನ್ನು ತಿರಸ್ಕರಿಸಿ ಕೇಂದ್ರದಲ್ಲಿ ಮೂರನೇ ಅವಧಿಗೆ ಸರ್ಕಾರವನ್ನು ಖಚಿತಪಡಿಸುವುದು ಎಂದು ಅಮಿತ್ ಶಾ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com