ನಾಲಿಗೆ ಬಿಗಿ ಹಿಡಿದು ಮಾತಾಡಿ, ಎರ್ರಬೆಲ್ಲಿಗೆ ಕೆಸಿಆರ್ ಎಚ್ಚರಿಕೆ

ತೆಲಂಗಾಣ ರಾಷ್ಟ್ರದ ಮೊದಲ ಬಜೆಟ್‌ನ ನಂತರ ಟಿಆರ್‌ಎಸ್ ...
ಕೆ.ಚಂದ್ರಶೇಖರ್ ರಾವ್  ಸಾಂಧರ್ಭಿಕ ಚಿತ್ರ
ಕೆ.ಚಂದ್ರಶೇಖರ್ ರಾವ್ ಸಾಂಧರ್ಭಿಕ ಚಿತ್ರ

ಹೈದರಾಬಾದ್: ತೆಲಂಗಾಣ ರಾಷ್ಟ್ರದ ಮೊದಲ ಬಜೆಟ್‌ನ ನಂತರ ಟಿಆರ್‌ಎಸ್ ಆಯೋಜಿಸಿದ್ದ ಬಿಎಸಿ ಸಮಾವೇಶದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹಾಗೂ ಎರ್ರಬೆಲ್ಲಿ ಮಧ್ಯೆ ವಾಗ್ವಾದ ನಡೆದಿದೆ.

ನಿನ್ನೆಯಷ್ಟೇ ಮೊದಲ ಬಾರಿಗೆ ತೆಲಂಗಾಣದ ವಿತ್ತ ಸಚಿವ ಇಟೆಲ ರಾಜೇಂದ್ರ 1 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದರು. ಬಜೆಟ್ ಕುರಿತಂತೆ ವ್ಯವಹಾರ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದ ಟಿಸಿಆರ್ ಇಂದು ಸಮಾವೇಶವೊಂದನ್ನು ಏರ್ಪಡಿಸಿತ್ತು.

ಸಮಾವೇಶದಲ್ಲಿ ವಿರೋಧ ಪಕ್ಷ ಟಿಡಿಪಿಯ ಒಬ್ಬ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಸದಸ್ಯರಿಗೆ ಟಿಸಿಆರ್ ಆಹ್ವಾನ ನೀಡಿತ್ತು. ಈ ಆಹ್ವಾನವನ್ನು ವಿರೋಧಿಸಿದ ಎರ್ರಬೆಲ್ಲಿ ದಯಾಕರ ರಾವ್, ಕಾಂಗ್ರೆಸ್ ಪಕ್ಷಕ್ಕೆ ನೀಡಿದಂತೆ ತಮ್ಮ ಪಕ್ಷದ ಇಬ್ಬರು ಸದಸ್ಯರಿಗೂ ಸಭೆಯಲ್ಲಿ ಭಾಗಿಯಾಗುವಂತೆ ಅವಕಾಶ ನೀಡಬೇಕು, ಅಧಿಕಾರ ಸ್ವೀಕರಿಸುವಾಗ ಎಲ್ಲರಿಗೂ ಸಮಾನ ಅವಕಾಶ ನೀಡುವುದಾಗಿ ಹೇಳಿದ್ದಿರಿ, ಮಾತು ನಾಲಿಗೆ ನುಡಿದಂತೆ ಇರಬೇಕು ಹೊರತು ಬಚ್ಚಲಾಗಬಾರದು ಎಂದಿದ್ದರು.

ಎರ್ರಬೆಲ್ಲಿಯ ಈ ಮಾತಿನಿಂದ ಕೋಪಗೊಂಡ ಕೆಸಿಆರ್ ನಾಲಿಗೆ ಬಿಗಿ ಹಿಡಿದು ಮಾತನಾಡಿದರೆ ಒಳಿತು, ಪಕ್ಷ ಹಮ್ಮಿಕೊಂಡಿರುವ ಸಮಾವೇಶಕ್ಕೆ ಯಾರನ್ನು ಆಹ್ವಾನಿಸಬೇಕು, ಯಾರನ್ನು ಆಹ್ವಾನಿಸಬಾರದು ಎಂಬುದು ತಮಗೆ ತಿಳಿದಿದ್ದು, ನಿಮಗೆ ಇಷ್ಟವಾಗದಿದ್ದರೆ ಸಭೆ ಬಿಟ್ಟು ಹೊರ ಹೋಗಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com