
ಅನಕೊಂಡ ಹಾವಿನ ಹೆಸರು ಕೇಳಿದರೇ ಸಾಕು ಭಯ ಆಗುತ್ತೆ. ಇನ್ನು ಆ ಹಾವಿನ ಆಹಾರವಾಗುವುದು ಎಂದರೆ ಕಲ್ಪಿಸಲು ಅಸಾಧ್ಯ. ಆದರೆ, ಇಲ್ಲೊಬ್ಬ ಉಗರ ಪ್ರಿಯನಿದ್ದಾನೆ.
ಯಾವುದೇ ಪ್ರಾಣಿಯನ್ನು ನುಂಗಿದಾಗ ಹಾವಿನ ಹೊಟ್ಟೆಯಲ್ಲಿ ಏನೇನಾಗುತ್ತೆ ಅಂತ ತಿಳಿಯಲು ತಾನೇ ಹಾವಿಗೆ ಆಹಾರವಾಗಿದ್ದಾನೆ! ದಕ್ಷಿಣ ಅಮೆರಿಕದಲ್ಲಿನ ಅಮೆಜಾನ್ ದಟ್ಟಕಾಡುಗಳಲ್ಲಿ ಇಂಥದ್ದೊಂದು ಭಯಾನಕ ಪ್ರಯೋಗ ನಡೆದಿದೆ.
ಎಲ್ಲಾ 'ಡಿಸ್ಕವರಿ'ಗಾಗಿ
ಮೈನವಿರೇಳಿಸುವ ಇಂಥ ಸಾಹಸ ಮಾಡಿರುವವನ ಹೆಸರು ಪಾಲ್ ರಸೋಲಿ(26). ಈತ ಒಬ್ಬ ಪ್ರಕೃತಿ ಪ್ರಿಯ. ವನ್ಯಜೀವಿಗಳ ಮೇಲೆ ಹಲವಾರು ಸಾಕ್ಷ್ಯ ಚಿತ್ರಗಳನ್ನು ತಯಾರಿಸಿದ್ದಾನೆ. ಆದರೆ, ಇಷ್ಟಕ್ಕೆ ತೃಪ್ತಿಯಾಗದ ಆತ, ಈಗ ಹಾವಿನೊಡನೆ ಸರಸವಾಡಲು ನಿರ್ಧರಿಸಿಬಿಟ್ಟ. ಅದಕ್ಕಾಗಿ ಆತ ತಾನು ನಿತ್ಯ ಅಲೆಯುತ್ತದ್ದ ಅಮೆಜಾನ್ ಕಾಡುಗಳಲ್ಲಿದ್ದ ಅನಕೊಂಡ ಜಾತಿಯ ಹಾವುಗಳಿಗೆ ಆಹಾರವಾಗುವುದಾಗಿ ನಿರ್ಧರಿಸಿದ. ತನ್ನ ಪ್ರಯೋಗಕ್ಕೆ ಅನುಕೂಲವಾಗುವಂಥ ಸುಮಾರು 30 ಅಡಿ ಉದ್ದದ ಅನಕೊಂಡವನ್ನು ಆಯ್ಕೆ ಮಾಡಿಕೊಂಡು, ಅದರ ಮುಂದೆ ನಿಂತು ಆಹಾರವಾಗಿದ್ದಾನೆ. ಅಂದಹಾಗೆ, ಪಾಲ್ ಇಂಥ ಸಾಹಸ ಮಾಡಲು ಮುಂದಾಗಿದ್ದು ಡಿಸ್ಕವರಿ ಚಾನೆಲ್‌ನ ಕಾರ್ಯಕ್ರಮಕ್ಕಾಗಿ!
ವಿಶೇಷ ಸಿದ್ಥತೆ
ತನ್ನ ಪ್ರಯೋಗಕ್ಕಾಗಿ ಪಾಲ್ ಒಂದು ವಿಶೇಷ ಕೋಟ್ ತಯಾರಿಸಿಕೊಂಡಿದ್ದ. ಇದಕ್ಕೆ ಸ್ನೇಕ್‌ಪ್ರೂಫ್ ಎಂದೂ ಹೆಸರಿಟ್ಟಿದ್ದ. ಇದರಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದ.
ಆಮೇಲೇನಾಯ್ತು
ಹಾವಿನ ಹೊಟ್ಟೆ ಸೇರಿದ ನಂತರ ಆತ ಬದುಕಿಬಂದನೇ ಎನ್ನುವುದು ಸದ್ಯಕ್ಕೆ ನಿಗೂಢ. ಇದು ಡಿಸ್ಕವರಿ ಚಾನೆಲ್ ಡಿ. 7ರಂದು ಪ್ರಸಾರ ಮಾಡುವ ವಿಶೇಷ ಕಾರ್ಯಕ್ರಮವನ್ನು ನೋಡಲೇಬೇಕು.
ಟೀಕೆಗೆ ಉತ್ತರ
ಪಾಲ್‌ನ ಈ ನಡೆ ಬಗ್ಗೆ ಪ್ರಾಣಿ ದಯಾ ಸಂಘಗಳು ಟೀಕೆ ಮಾಡಿವೆ. ಆದರೆ, ಇದನ್ನು ಒಪ್ಪದ ಪಾಲ್, ಮೊದಲು ಡಿಸ್ಕವರಿ ಚಾನೆಲ್‌ನಲ್ಲಿ ಮೂಡಿಬರೋ ಕಾರ್ಯಕ್ರಮ ನೋಡಿ ಆನಂತರ ಮಾತಾಡಿ. ನಾನು ಯಾವುದೇ ಜೀವಂತ ಪ್ರಾಣಿಯನ್ನು ಈವರೆಗೆ ನೋಯಿಸಿಲ್ಲ ಎಂದಿದ್ದಾನೆ.
Advertisement