ಅಗ್ನಿ-2 ಕ್ಷಿಪಣಿ ಉಡಾವಣಾ ಪರೀಕ್ಷೆ ಯಶಸ್ವಿ

ಸ್ವದೇಶಿ ನಿರ್ಮಿತ ಅಗ್ನಿ-2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತೀಯ ಸೇನೆ ಭಾನುವಾರ ಯಶಸ್ವಿಯಾಗಿ ನಡೆಸಿದೆ.
ಸಾಂದರ್ಭಿಕ ಚಿತ್ರ-ಸ್ವದೇಶಿ ನಿರ್ಮಿತ ಅಗ್ನಿ-2 ಕ್ಷಿಪಣಿ ಯಶಸ್ವಿ ಉಡಾವಣೆ
ಸಾಂದರ್ಭಿಕ ಚಿತ್ರ-ಸ್ವದೇಶಿ ನಿರ್ಮಿತ ಅಗ್ನಿ-2 ಕ್ಷಿಪಣಿ ಯಶಸ್ವಿ ಉಡಾವಣೆ

ಭುವನೇಶ್ವರ: ಸ್ವದೇಶಿ ನಿರ್ಮಿತ ಅಗ್ನಿ-2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತೀಯ ಸೇನೆ ಭಾನುವಾರ ಯಶಸ್ವಿಯಾಗಿ ನಡೆಸಿದೆ.

ಒಡಿಶಾ ರಾಜ್ಯದ ಭದ್ರಕ್ ಜಿಲ್ಲೆಯಲ್ಲಿರುವ ದ್ವೀಪದ ಭಾರತೀಯ ಸೇನೆಯ ಶಿಬಿರದಲ್ಲಿ ಇಂದು ಬೆಳಗ್ಗೆ 8.48ಕ್ಕೆ ಈ ಪರೀಕ್ಷೆ ನಡೆದಿದ್ದು, ಕ್ಷಿಪಣಿಯು ನಿಗದಿತ ಸಮಯದಲ್ಲಿ ನಿಖರ ಗುರಿಯನ್ನು ತಲುಪುವ ಮೂಲಕ ಯಶಸ್ವಿಯಾಗಿದೆ. ಅಗ್ನಿ-2 ಕ್ಷಿಪಣಿಯು ಮಧ್ಯಮ ಗಾತ್ರದ ಕ್ಷಿಪಣಿಯಾಗಿದ್ದು, ಸುಮಾರು 2000 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಅಗ್ನಿ-2 ಸರಣಿಯ ಕ್ಷಿಪಣಿಗಳು ಈಗಾಗಲೇ ಭಾರತೀಯ ಸೇನೆಯ ಬತ್ತಳಿಕೆಯನ್ನು ಸೇರಿದ್ದು, ಪ್ರಸ್ತುತ ಕ್ಷಿಪಣಿಯು ಹೊಸ ಸೇರ್ಪಡೆಯಷ್ಟೇ. ಖಂಡಾಂತರ ಕ್ಷಿಪಣಿಯಾಗಿರುವ ಅಗ್ನಿ-2. ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಅಗ್ನಿ-2 ಕ್ಷಿಪಣಿಗೆ ಅತ್ಯಾಧುನಿಕ advanced high-accuracy navigation system ಅನ್ನು ಅಳವಡಿಸಲಾಗಿದ್ದು, ಕ್ಷಿಪಣಿಯ ನಿಖರ ಹಾದಿಯನ್ನು ಈ ವ್ಯವಸ್ಥೆಯ ಮೂಲಕವಾಗಿ ನಿಯಂತ್ರಿಸಬಹುದಾಗಿದೆ.

ಕ್ಷಿಪಣಿಯು ಸುಮಾರು 17 ಟನ್ ತೂಕವಿದ್ದು, ಇದರ ದೂರಗಾಮಿ ಸಾಮರ್ಥ್ಯವನ್ನು 3 ಸಾವಿರ ಕಿ.ಮೀ.ಗೆ ವಿಸ್ತರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com