ಮಂಕಿಗೇಟ್ ಪ್ರಕರಣ: ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ವಾಗ್ದಾಳಿ

ಸಾಂದರ್ಭಿಕ ಚಿತ್ರ- ಅಲನ್ ಬಾರ್ಡರ್
ಸಾಂದರ್ಭಿಕ ಚಿತ್ರ- ಅಲನ್ ಬಾರ್ಡರ್

ಸಿಡ್ನಿ: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮಂಕಿಗೇಟ್ ಪ್ರಕರಣ ನಡೆದ ಸಂದರ್ಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ), ತನ್ನ ಸ್ವಾಭಿಮಾನವನ್ನು ಬಿಸಿಸಿಐಗೆ ಅಡ ಇಟ್ಟು ಹೇಡಿಯಂತೆ ವರ್ತಿಸಿತು ಎಂದು ಆಸೀಸ್‌ನ ಮಾಜಿ ಕ್ರಿಕೆಟಿಗ ಅಲನ್ ಬಾರ್ಡರ್ ಹೇಳಿಕೊಂಡಿದ್ದಾರೆ.

ತಮ್ಮ ಇತ್ತೀಚಿನ 'ಕ್ರಿಕೆಟ್ ಆ್ಯಸ್ ಐ ಸೀ ಇಟ್‌' ಎಂಬ ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ಮಂಕಿಗೇಟ್ ಪ್ರಕರಣದಲ್ಲಿ ಸಿಎ ನಡೆದುಕೊಂಡ ರೀತಿಗೆ ಬೇಸತ್ತು ತಾವು ಆ ಮಂಡಳಿಯನ್ನು ತ್ಯಜಿಸಿದ್ದಾಗಿ ತಿಳಿಸಿದ್ದಾರೆ. ಮಂಕಿಗೇಟ್ ಪ್ರಕರಣದ ಬಿಸಿ ತಾರಕ್ಕೇರಿದಾಗಲೂ ಕ್ರಿಕೆಟ್ ಆಸ್ಟ್ರೇಲಿಯಾ, ತನ್ನ ಆಟಗಾರರ ಮೇಲೆ ಭಾರತದ ಯಾವುದೇ ಆಟಗಾರನ ವಿರುದ್ಧ ಹೇಳದಂತೆ ಒತ್ತಡ ಹೇರಿತು. ಈ ಮೂಲಕ, ಸತ್ಯವನ್ನು ಮರೆಮಾಚಲು ಪ್ರಯತ್ನಿಸಿತು. ತನ್ನದೇ ನೆಲದಲ್ಲಿ ತನ್ನ ಆಟಗಾರರೇ ಅಪಮಾನ ಎದುರಿಸಿದರೂ ಸಿಎಂ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆ ಸಂದರ್ಭದಲ್ಲಿ, ಮಂಡಳಿಗೆ ಸ್ವಾಭಿಮಾನಕ್ಕಿಂತ ಹಣವೇ ಮುಖ್ಯವಾಗಿತ್ತು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಏನಿದು ಪ್ರಕರಣ? 2007-08ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ನಡೆದ ಪ್ರಕರಣವಿದು. ಸಿಡ್ನಿಯಲ್ಲಿ ನಡೆದ ಪಂದ್ಯದ ವೇಳೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್, ಆಸೀಸ್‌ನ ಆ್ಯಂಡ್ರೂ ಸೈಮಂಡ್ಸ್ ಅವರ ಮೇಲೆ ಜನಾಂಗೀಯ ನಿಂದನೆ ಮಾಡಿದ್ದರೆಂಬ ಟೀಕೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com