ಇಸಿಸ್ ಮುಖ್ಯಸ್ಥ ಬಾಗ್ದಾದಿ ಹತ್ಯೆ?

ಸಾಂದರ್ಭಿಕ ಚಿತ್ರ- ಅಬು ಬಕಾರ್ ಅಲ್ ಬಾಗ್ದಾದಿ
ಸಾಂದರ್ಭಿಕ ಚಿತ್ರ- ಅಬು ಬಕಾರ್ ಅಲ್ ಬಾಗ್ದಾದಿ

ಇರಾಕ್: ಅಮೆರಿಕಾದ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಸಿಸ್ ಮುಖ್ಯಸ್ಥ ಅಬು ಬಕಾರ್ ಅಲ್ ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಯುಎಸ್ ದಾಳಿಯಲ್ಲಿ ಬಾಗ್ದಾದಿ ಗಂಭೀರವಾಗಿರುವುದು ನಿಜ ಆದರೆ ಅವರು ಸಾವನ್ನಪ್ಪಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯನ್ನು ಸದೆಬಡಿಯಲು ಅಮೆರಿಕ ಇರಾಕ್ ಜೊತೆಗೂಡಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ಉತ್ತರ ಇರಾಖ್‌ನ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ ಎಂದು ಯುಎಸ್ ಕಮಾಂಡೋಗಳು ಹೇಳಿದ್ದರು. ಇದೀಗ ಬಾಗ್ದಾದಿ ಸಾವನ್ನಪ್ಪಿರುವ ಬಗ್ಗೆ ನಿಖರ ಮಾಹಿತಿಗಳು ಲಭ್ಯವಾಗಿಲ್ಲದೇ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಬಾಗ್ದಾದಿ ಸಾವನ್ನಪ್ಪಿರುವ ಬಗ್ಗೆ ಇರಾಕ್ ಸರ್ಕಾರ ತನಿಖೆಗೆ ಆದೇಶಿಸಿದ್ದು, ಒಂದು ವೇಳೆ ಬಾಗ್ದಾದಿ ಸಾವನ್ನಪ್ಪಿರುವುದು ಖಚಿತವಾದ ಅಮೆರಿಕ ಮತ್ತು ಇರಾಕ್ ಜಂಟಿ ಕಾರ್ಯಾಚರಣೆಗೆ ಬಹುದೊಡ್ಡ ಜಯ ಸಿಕ್ಕಂತಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com