ಮೀನುಗಾರರ ಪ್ರಕರಣವನ್ನು ಭಾರತಕ್ಕೆ ರವಾನಿಸಬೇಕು: ಸ್ವಾಮಿ

ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಶ್ರೀಲಂಕಾದಲ್ಲಿ ಮರಣ ದಂಡನೆಗೆ ಗುರಿಯಾಗಿರುವ 5 ಮೀನುಗಾರರ ಪ್ರಕರಣವನ್ನು ಭಾರತಕ್ಕೆ ರವಾನಿಸಬೇಕು..
ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ
ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ

ಚೆನ್ನೈ: ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಶ್ರೀಲಂಕಾದಲ್ಲಿ ಮರಣ ದಂಡನೆಗೆ ಗುರಿಯಾಗಿರುವ 5 ಮೀನುಗಾರರ ಪ್ರಕರಣವನ್ನು ಭಾರತಕ್ಕೆ ರವಾನಿಸಬೇಕು ಎಂದು ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸೋಮವಾರ ನವದೆಹಲಿಯಲ್ಲಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ ಅವರು,'2010ರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದದಂತೆ ಶ್ರೀಲಂಕಾ ಭಾರತೀಯ ಮೂಲದ ಮೀನುಗಾರರ ಪ್ರಕರಣವನ್ನು ಭಾರತಕ್ಕೆ ರವಾನಿಸಬೇಕಿದೆ. ಪ್ರಸ್ತುತ ಶ್ರೀಲಂಕಾ ಕರಾವಳಿ ಪಡೆಗಳಿಂದ ಬಂಧನಕ್ಕೀಡಾಗಿರುವ ಚೆನ್ನೈ ಮೂಲದ ಮೀನುಗಾರರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಮೀನುಗಾರರ ಪ್ರಕರಣವನ್ನು ಭಾರತಕ್ಕೆ ವರ್ಗಾಯಿಸಬೇಕು ಎಂದು ಕೇಳಿದ್ದಾರೆ' ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆ ಬಳಿಕ ರಾಜಪಕ್ಸೆ ಪ್ರಕರಣವನ್ನು ಭಾರತಕ್ಕೆ ವರ್ಗಾಯಿಸಲು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ಮೀನುಗಾರರನ್ನು ಭಾರತೀಯ ಜೈಲಿಗೆ ರವಾನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಆರೋಪ ಸಾಬೀತಾದರೆ ಭಾರತೀಯ ಕಾನೂನಿನ ಅನ್ವಯ ಅವರಿಗೆ ಶಿಕ್ಷೆಯಾಗಲಿದೆ.

2011ರಲ್ಲಿ ಭಾರತೀಯ ಕರಾವಳಿ ವ್ಯಾಪ್ತಿಯನ್ನು ಮೀರಿ ಹೋಗಿದ್ದ ಬೋಟ್ ಅನ್ನು ಶ್ರೀಲಂಕಾ ಕರಾವಳಿ ಪಡೆ ವಶಪಡಿಸಿಕೊಂಡು, ಅದರಲ್ಲಿದ್ದ ಎಲ್ಲಾ ಐವರು ಮೀನುಗಾರರನ್ನು ಬಂಧಿಸಿತ್ತು. ಬಳಿಕ ವಿಚಾರಣೆ ನಡೆಸಿದ್ದ ಕರಾವಳಿ ಪಡೆ ಈ ಐವರು ಮೀನುಗಾರರು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಿ ಜೈಲಿಗೆ ಅಟ್ಟಲಾಗಿತ್ತು. ಇತ್ತೀಚೆಗೆ ಪ್ರಕರಣದಲ್ಲಿ ಶ್ರೀಲಂಕಾ ನ್ಯಾಯಾಲಯ ಈ ಐವರು ಮೀನುಗಾರರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಶಿಕ್ಷೆಯನ್ನು ಪ್ರಶ್ನಿಸಲು ಭಾರತ ಸರ್ಕಾರಕ್ಕೆ ನವೆಂಬರ್ 11ರವರೆಗೆ ಕಾಲಾವಕಶವಿದ್ದು, ಇಂದೇ ಭಾರತ ಪ್ರಧಾನಿ ನರೇಂದ್ರ ಮೊದಿ ಅವರು ಶ್ರೀಲಂಕಾ ಅಧ್ಯಕ್ಷ ರಾಜರಪಕ್ಸೆ ಅವರೊಂದಿಗೆ  ದೂರವಾಣಿ ಮೂಲಕ ಮಾತನಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com