'ಮಹಾ' ಸ್ಪೀಕರ್ ಆಗಿ ಬಾಗ್ಡೆ ಅವಿರೋಧ ಆಯ್ಕೆ

ಮಹಾರಾಷ್ಟ್ರ ವಿಧಾಸಭೆಯ ನೂತನ ಸ್ಪೀಕರ್ ಆಗಿ ಹರಿಭಾವು ಬಾಗ್ಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಇದರಿಂದ...
ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್

ಮುಂಬೈ: ಮಹಾರಾಷ್ಟ್ರ ವಿಧಾಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿಯ ಹರಿಭಾವು ಬಾಗ್ಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಮಹಾರಾಷ್ಟ್ರ ಸ್ಪೀಕರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ-ಶಿವಸೇನೆ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳೂ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದವು. ಆದರೆ  ನಾಮಪತ್ರ ವಾಪಸ್ ಪಡೆಯುವಂತೆ ಸಿಎಂ ಫಡ್ವವಿಸ್ ಅವರು ಕಾಂಗ್ರೆಸ್ ಹಾಗೂ ಶಿವಸೇನೆಗೆ ಮನವಿ ಮಾಡಿದ್ದರಿಂದ ಎರಡೂ ಪಕ್ಷಗಳು ಇಂದು ನಾಮಪತ್ರಗಳನ್ನು ಹಿಂಪಡೆದಿದ್ದವು. ಹೀಗಾಗಿ ಬಾಗ್ಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸ್ಪೀಕರ್ ಆಯ್ಕೆಯಲ್ಲಿ ಗೆಲುವು ಸಾಧಿಸಿರುವ ಫಡ್ನವಿಸ್ ಅವರು ಇಂದು ಮಧ್ಯಾಹ್ನ ನಡೆಯುವ ಅಗ್ನಿ ಪರೀಕ್ಷೆಯಲ್ಲೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಏಕೆಂದರೆ ಸರಳ ಬಹುಮತಕ್ಕೆ 148 ಶಾಸಕರ ಬೆಂಬಲ ಬೇಕು. ಫಡ್ನವಿಸ್ ಅವರಿಗೆ ಸದ್ಯ 138 ಶಾಸಕರ ಬೆಂಬಲವಿದೆ. ಬಿಜೆಪಿಯ 121 ಶಾಸಕರ ಜತೆಗೆ 7 ಪಕ್ಷೇತರ ಮತ್ತು ಇತರ ಸಣ್ಣಪುಟ್ಟ ಪಕ್ಷಗಳ ಶಾಸಕರು, ರಾಷ್ಟ್ರೀಯ ಸಮಾಜ ಪಕ್ಷದ ಒಬ್ಬ, ಬಹುಜನ ವಿಕಾಸ ಆಗಾಡಿ ಪಕ್ಷದ ಮೂವರು ಶಾಸಕರು ಫಡ್ನವಿಸ್ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com