'ಬಾಘ್ಬಾನ್' ನಿರ್ದೇಶಕ ರವಿ ಛೋಪ್ರಾ ಇನ್ನಿಲ್ಲ
ಮುಂಬೈ: ಬಾಲಿವುಡ್ನ ಖ್ಯಾತ ನಿರ್ಮಾಪಕ ಹಾಗು ನಿರ್ದೇಶಕ ರವಿ ಛೋಪ್ರಾ(68) ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಛೋಪ್ರಾ ಕಳೆದ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಛೋಪ್ರಾ ಇಂದು ಮಧ್ಯಾಹ್ನ ಸುಮಾರು 3.30ಕ್ಕೆ ಇಹಲೋಕ ತ್ಯಜಿಸಿದ್ದಾರೆ.
'ಬಾಘ್ಬಾನ್' ಚಿತ್ರದ ನಿರ್ದೇಶಕ ನಿರ್ದೇಶಕರಾಗಿದ್ದ ರವಿ ಛೋಪ್ರಾ ಬಹುಮುಖ ಪ್ರತಿಭೆಯಾಗಿದ್ದರು. ಹಲವು ಪ್ರಸಿದ್ದ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಛೋಪ್ರಾ ಶ್ವಾಸಕೋಶ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿದ್ದರು.
ಕಳೆದ ಗುರವಾರದಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಛೋಪ್ರಾ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು, ಮತ್ತೆ ಚಿಕಿತ್ಸೆಗೆ ಸ್ಪಂಧಿಸಲಾಗದೆ ಇಂದು ಛೋಪ್ರಾ ತಮ್ಮ ಕೊನೆಯುಸಿರೆಳೆದಿದ್ದಾರೆ.
ಛೋಪ್ರಾ ಅವರ ನಿಧನದಿಂದಾಗಿ ಇದೀಗ ಬಾಲಿವುಡ್ನಲ್ಲಿ ಕಪ್ಪು ಛಾಯೆ ಆವರಿಸಿದೆ. ಛೋಪ್ರಾ ಅವರ ಅಂತಿಮ ದರ್ಶನಪಡೆಯಲು ಹಲವು ಗಣ್ಯರು ಆಗಮಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ