ನವದೆಹಲಿ: ಬಾಲ್ಯದ ಗೆಳತಿ ಸಾಕ್ಷಿಯನ್ನು ವರಿಸಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್ ಧೋನಿ ಅವರು ಸದ್ಯದಲ್ಲೇ ತಂದೆಯಾಗಲಿದ್ದಾರೆ.
ಜುಲೈ 4, 2010ರಂದು ಹಸೆಮಣೆ ಹೇರಿದ್ದ ಎಂ.ಎಸ್ ಧೋನಿ ಹಾಗೂ ಸಾಕ್ಷಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಸದ್ಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಗೆ ಧೋನಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದು, ಮುಂಬರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೂ ನಾಯಕರಾಗಿ ಮುಂದುವರೆಯಲಿದ್ದಾರೆ.
33 ವರ್ಷದ ಧೋನಿ ಅವರು 2010ರ ಜುಲೈ 4ರಂದು ಸಾಕ್ಷಿಯನ್ನು ವಿವಾಹವಾಗಿದ್ದರು. ಸದ್ಯ ಸಾಕ್ಷಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ವರದಿಗಳು ಹೇಳುತ್ತಿವೆ.
ಕಳೆದ ಏಪ್ರಿಲ್‌ನಲ್ಲೇ ಸಾಕ್ಷಿ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದಕ್ಕೆ ಪುಷ್ಠಿ ಕೊಡುವಂತಾ ಯಾವುದೇ ವರದಿಗಳು ಇಲ್ಲವಾಗಿತ್ತು. ಈ ಸುದ್ದಿಯನ್ನು ಸ್ವತಃ ಸಾಕ್ಷಿ ಅವರೇ ಸುಳ್ಳು ಸುದ್ದಿ ಎಂದು ಅಲ್ಲಗೆಳೆದಿದ್ದರು.
Advertisement