
ನವದೆಹಲಿ: ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಕರಣವನ್ನು ಸ್ವಯಂ ಪ್ರೇರಿತ ದೂರನ್ನಾಗಿ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣವನ್ನು ಕೈಗೆತ್ತಿಕೊಂಡ ಹೆಚ್.ಎಲ್.ದತ್ತು ನೇತೃತ್ವದ ಪೀಠವು ಪ್ರಧಾನ ಮಂತ್ರಿ ಹಾಗೂ ಛತ್ತೀಸ್‌ಗಡದ ಮುಖ್ಯಮಂತ್ರಿಗಳು ಪ್ರಕರಣವನ್ನು ಸ್ವಯಂಪ್ರೇರಿತ ದೂರನ್ನಾಗಿ ದಾಖಲಿಸಲು ಸೂಚಿಸಿರಬಹುದು ಆದರೆ ಇಂತಹ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವರ್ಯಪ್ರೇರಿತ ದೂರನ್ನಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳನ್ನೇ ಸಾಕ್ಷ್ಯವನ್ನಾಗಿ ಕೋರ್ಟ್‌ಗೆ ನೀಡುವುದು ಸರಿಯಲ್ಲ ಎಂದಿರುವ ಸುಪ್ರೀಂ ಸೂಕ್ತ ರೀತಿಯಲ್ಲಿ ಅರ್ಜಿಸಲ್ಲಿಸುವಂತೆ ತಿಳಿಸಿದೆ.
ಜನಸಂಖ್ಯಾ ಸ್ಫೋಟ ನಿಯಂತ್ರಿಸುವ ಸಲುವಾಗಿ ಬಿಲಾಸ್ ಪುರದಲ್ಲಿ ಛತ್ತೀಸ್‌ಘಡದ ಸರ್ಕಾರ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಿತ್ತು. ಶಿಬಿರದಲ್ಲಿ ಸುಮಾರು 80 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಿಬಿರದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಸುಮಾರು 11 ಮಂದಿ ಮಹಿಳೆಯರು ಸಾವನ್ನಪ್ಪಿದ್ದರಲ್ಲದೇ 49 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.
ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಕರಣಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಆದೇಶಿಸಿದ್ದರಲ್ಲದೆ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವಂತೆ ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ್‌ಸಿಂಗ್‌ರವರಿಗೆ ಆದೇಶ ನೀಡಿದ್ದರು.
Advertisement