

ಬ್ರಿಸ್ಬೇನ್: ಕಪ್ಪುಹಣವನ್ನು ಹತ್ತಿಕ್ಕಬೇಕಾದರೆ ಜಾಗತಿಕ ಸಹಕಾರದ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಎರಡನೇ ದಿನವಾದ ಇಂದು ನರೇಂದ್ರ ಮೋದಿ ಕಪ್ಪು ಹಣ ವಾಪಾಸ್ಸಾತಿಗೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣವನ್ನು ವಾಪಸ್ ತರುವ ಉದ್ದೇಶ ಇಟ್ಟುಕೊಂಡಿದೆ. ಆದರೆ ಇದಕ್ಕೆ ಜಾಗತಿಕ ಸಹಾಕಾರದ ಅವಶ್ಯಕತೆ ಇದೆ ಎಂದಿದ್ದಾರೆ.
ತೆರಿಗೆ ತಪ್ಪಿಸಿ ಇಡಲಾದ ಹಣ ಕೂಡ ಭದ್ರತೆಗೆ ಸವಾಲಿದ್ದಂತೆ. ಈ ಹಿನ್ನಲೆಯಲ್ಲಿ ಭಾರತೀಯರು ಹೊಂದಿರುವ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ನೀಡಿ, ಕಪ್ಪು ಹಣ ಹೊಂದಿರುವವರನ್ನು ಪತ್ತೆ ಹಚ್ಚಲು ಸಹಕಾರ ನೀಡಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.
ಜಿ-20 ಶೃಂಗ ಸಭೆಯ ಮೊದಲ ದಿನವಾದ ನಿನ್ನೆ ಮೋದಿ ಅವರು ಸುಧಾರಣೆ ಬಗ್ಗೆ ಮಾತನಾಡಿದ್ದರು. ಇಂದು ಕಪ್ಪು ಹಣ ಕುರಿತು ಶೃಂಗ ಸಭೆಯಲ್ಲಿ ಚರ್ಚಿಸಿದ್ದಾರೆ.