
ನವದೆಹಲಿ: ದೇಶದಲ್ಲಿ ಮೊದಲ ಎಬೊಲಾ ಪ್ರಕರಣ ಪತ್ತೆಯಾಗಿದೆ. ಲೈಬೀರಿಯಾದಿಂದ ವಾಪಾಸಾದ ಭಾರತೀಯರೊಬ್ಬರ ದೇಹದಲ್ಲಿ ಎಬೊಲಾ ವೈರೆಸ್ ಪತ್ತೆಯಾಗಿದ್ದು, ಆತನ್ನು ದೆಹಲಿ ಏರ್‌ಪೋರ್ಟ್‌ನ ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ನ.10 ರಂದು ದೆಹಲಿಗೆ ಬಂದಿಳಿದ 26 ವರ್ಷದ ವ್ಯಕ್ತಿ ಈ ಹಿಂದೆ ಆಫ್ರಿಕಾದಲ್ಲಿ ಎಬೊಲಾಗಾಗಿ ಚಿಕಿತ್ಸೆ ಪಡೆದು, ಗುಣಮುಖನಾಗಿದ್ದ. ಆದರೆ ಆತನ ವೀರ್ಯ ಮಾದರಿಯ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಎಂಬ ಫಲಿತಾಂಶ ಬಂದಿದೆ. ಆ ವ್ಯಕ್ತಿಯ ರಕ್ತದ ಮಾದರಿಯನ್ನು ಮೂರು ಬಾರಿ ಪರೀಕ್ಷೆ ನಡೆಸಿದಾಗಲೂ ಫಲಿತಾಂಶ ನೆಗೆಟಿವ್ ಎಂದು ಬಂದಿದೆ. ಹೀಗಾಗಿ ಆತ ಬೇಗನೆ ಗುಣಮುಖನಾಗಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಎಬೊಲಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Advertisement