ಯಾರಿಗೆ ಸಾಲುತ್ತೆ ಸೌಲತ್ತು, ಸಂಸದರಿಗೆ ಇನ್ನೂ ಕೊಡ್ಬೇಕಂತೆ ಹೆಚ್ಚಿನ ಒತ್ತು!

ನಾಲ್ಕು ವರ್ಷಗಳ ಹಿಂದೆ ಸಂಸತ್‌ನಲ್ಲಿ ಶೇ.300ರಷ್ಟು ಸಂಬಳ ಹೆಚ್ಚಿಸಿಕೊಂಡಿದ್ದ ಸಂಸದರಿಗೆ ಇನ್ನೂ ಹೆಚ್ಚಿನ ಸವಲತ್ತು ಬೇಕಂತೆ. ಈಗ ಅದು ಸಾಕಾಗುತ್ತಿಲ್ಲ. ಇನ್ನೂ ಬೇಕಂತೆ!
ನವದೆಹಲಿಯಲ್ಲಿರುವ ಸಂಸತ್ ಭವನ (ಸಾಂದರ್ಭಿಕ ಚಿತ್ರ)
ನವದೆಹಲಿಯಲ್ಲಿರುವ ಸಂಸತ್ ಭವನ (ಸಾಂದರ್ಭಿಕ ಚಿತ್ರ)
Updated on

ಮನೆಕಟ್ಟೋಕೆ ಬಡ್ಡಿ ಸಾಲ ಕೊಡ್ಸಿ: ಕೇಂದ್ರಕ್ಕೆ ಸ್ಥಾಯಿ ಸಮಿತಿ ಶಿಫಾರಸ್ಸು ಸಲ್ಲಿಕೆ
ಸಂಸದರ ಸಂಬಳ, ಇತರ ಸವಲತ್ತು ನೋಡಿಕೊಳ್ಳುವ ಸಂಸತ್ ಸ್ಥಾಯಿ ಸಮಿತಿಯಿಂದ 27 ಬೇಡಿಕೆಗಳ ಪಟ್ಟಿ ಸಲ್ಲಿಕೆ
ಸವಲತ್ತು ಹೆಚ್ಚಬೇಕೆಂದರೆ ಈಗಿರುವ ಕಾನೂನಿಗೆ ಸಂಸತ್ತಿನ ತಿದ್ದುಪಡಿ ತಂದು ಒಪ್ಪಿಗೆ ಪಡೆಯಬೇಕಾಗುತ್ತದೆ.


ನವದೆಹಲಿ: ನಾಲ್ಕು ವರ್ಷಗಳ ಹಿಂದೆ ಸಂಸತ್‌ನಲ್ಲಿ ಶೇ.300ರಷ್ಟು ಸಂಬಳ ಹೆಚ್ಚಿಸಿಕೊಂಡಿದ್ದ ಸಂಸದರಿಗೆ ಇನ್ನೂ ಹೆಚ್ಚಿನ ಸವಲತ್ತು ಬೇಕಂತೆ. ಈಗ ಅದು ಸಾಕಾಗುತ್ತಿಲ್ಲ. ಇನ್ನೂ ಬೇಕಂತೆ!

ಅವರಿಗೆ ಈಗ ಕ್ಷೇತ್ರ ಭತ್ಯೆ, ಸಂಸದರ ಸ್ಥಳೀಯಾಭಿವೃದ್ದಿ ನಿಧಿ ಹೆಚ್ಚಾಗಬೇಕಂತೆ. ಹೀಗೆಂದು ಸಂಸದರ ಸಂಬಳ ಮತ್ತು ಇತರೆ ಸವಲತ್ತುಗಳನ್ನು ನೋಡಿಕೊಳ್ಳುವ ಸಂಸತ್‌ನ ಸ್ಥಾಯಿ ಸಮಿತಿ 27 ಬೇಡಿಕೆಗಳ ಪಟ್ಟಿ ದೊಡ್ಡದಾಗಿಯೇ ಇದೆ. ಆಪ್ತ ಸಹಾಯಕರಿಗೆ ಸಂಬಳ, ಪತಿ ಅಥವಾ ಪತ್ನಿಯರಿಗೆ ಮಾತ್ರವಲ್ಲದೆ ಬೆಂಬಲಿಗರಿಗೆ ಕೂಡ ಉಚಿತ ರೈಲು ಪ್ರಯಾಣದ ವ್ಯವಸ್ಥೆ ನೀಡಬೇಕು ಎಂದು ಸಲಹೆ ಮಾಡಿದೆ. ಅತ್ಯಂತ ಕುತೂಹಲಕಾರಿ ಅಂಶವೆಂದರೆ ವೇತನ ಹೆಚ್ಚಳಕ್ಕೆ ಶಾಶ್ವತವಾದ ಸಮಿತಿ ರಚನೆ ಮಾಡಬೇಕು ಎನ್ನುವುದು.

ಮನೆಸಾಲಬೇಕು: ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ನೇತೃತ್ವದ ಸಮಿತಿ ಸಂಸದರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ನೀಡಬೇಕೆಂದು ಅಭಿಪ್ರಾಯಪಟ್ಟಿದೆ. ಈಗಾಗಲೇ ಸಂಸದರಿಗೆ ಬಾಡಿಗೆ ಇಲ್ಲದೆ ಫ್ಲ್ಯಾಟ್ ಮತ್ತು ಬಂಗಲೆ ನೀಡಲಾಗುತ್ತಿದೆ. ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ದೆಹಲಿಯಿಂದ ಹೊರಕ್ಕೆ ಪ್ರವಾಸ ಕೈಗೊಂಡಾಗ ಅವರಿಗೆ ಭದ್ರತೆ ನೀಡುವಂತೆ ಶಿಫಾರಸು ಮಾಡಿದೆ.

15 ಸೀಟುಗಳು ಬೇಕು:
ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸದರ ಕೋಟಾಕ್ಕೆ ಇಬ್ಬರಿಗೆ ಪ್ರವೇಶಾವಕಾಶ ನೀಡಲು ಅವಕಾಶ ಉಂಟು. ಅದನ್ನು 15ಕ್ಕೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಬದಲು ಮಾಡುವುದು ಹೇಗೆ?
ಸಂಸದರ ಸಂಬಳ ಮತ್ತು ಇತರ ಸವಲತ್ತುಗಳ ಹೆಚ್ಚಳಕ್ಕೆ ಇರುವ ಕಾನೂನಿಗೆ ಸಂಸತ್ತಿನಲ್ಲಿ ತಿದ್ದುಪಡಿ ತಂದು ಒಪ್ಪಿಗೆ ಪಡೆಯಲಾಗುತ್ತದೆ. ಈ ಮೂಲಕ ಅದನ್ನು ಪರಿಷ್ಕರಿಸಲಾಗುತ್ತದೆ.

ಪಿಂಚಣಿ ಹೆಚ್ಚಳ?
ಮಾಜಿ ಸಂಸದರಿಗೆ ಈಗ 20 ಸಾವಿರ ಪಿಂಚಿಣಿ ಲಭಿಸುತ್ತಿದೆ. ಅದನ್ನು 35 ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ವಿಧೇಯಕ ಮಂಡಿಸಲು ಕೇಂದ್ರ ಮುಂದಾಗಿದೆ. ಸಂಸದರ ವಿಚ್ಛೇದಿತ ಅಥವಾ ವಿಧವೆಯಾಗಿರುವ ಪುತ್ರಿಯರನ್ನು ಇನ್ನು ಮುಂದೆ ಅವಲಂಬಿತರು ಎಂದು ಪರಿಗಣಿಸುವ ಬಗ್ಗೆಯೂ ಪರಿಶೀಲನೆ ನಡೆದಿದೆ.

ಸಂಸದರಿಗೆ ಈಗ ಸಿಗುತ್ತಿರುವುದು
50 ಸಾವಿರ ಪ್ರತಿ ತಿಂಗಳ ಸಂಬಳ
2 ಸಾವಿರ ದೈನಂದಿನ ಭತ್ಯೆ
ಬಾಡಿಗೆ ಇಲ್ಲದ ಫ್ಲಾಟ್. ಅತ್ಯಂತ ಕಡಿಮೆ ದರದ ಬಂಗಲೆಗಳು
ಸಂಸದರ ಪತಿ ಅಥವಾ ಪತ್ನಿಗೆ ರೈಲುಗಳಲ್ಲಿ ಮೊದಲ ದರ್ಜೆಯ ಎಸಿ ಪಾಸ್ ವ್ಯವಸ್ಥೆ
ಕಡಿಮೆ ಬಡ್ಡಿದರದಲ್ಲಿ ವಾಹನ ಸಾಲ

ಬೇಡಿಕೆ ಏನು?
ಅಧ್ಯಯನ ಸಂಬಳ, ಭತ್ಯೆ
ಕ್ಷೇತ್ರ ಭತ್ಯೆಯಲ್ಲಿ ಹೆಚ್ಚಳ, ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಹೆಚ್ಚಳ, ಆಪ್ತ ಸಹಾಯಕರಿಗೆ ನೀಡುವ ಸಂಬಳ
ರಾಜ್ಯಗಳ ರಾಜಧಾನಿಯಲ್ಲಿ ಸಂಸದರಿಗಾಗಿ ಅತಿಥಿ ಗೃಹ
ಪತಿ ಅಥವಾ ಪತ್ನಿಗೆ ಮಾತ್ರವಲ್ಲ ಬೆಂಬಲಿಗರಿಗೆ ಉಚಿತ ರೈಲು ಪ್ರಯಾಣ
ಕಡಿಮೆ ಬಡ್ಡಿದರದಲ್ಲಿ ಗೃಹಸಾಲ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com