
ವಾಷಿಂಗ್ಟನ್: ಅಕ್ರಮವಾಗಿ ಅಮೆರಿಕಗೆ ವಲಸೆ ಬಂದು ನೆಲೆಸಿರುವ ಸುಮಾರು 5 ಮಿಲಿಯನ್ಗೂ ಹೆಚ್ಚು ವಲಸಿಗರಿಗೆ ಕಾನೂನಾತ್ಮಕ ಸ್ಥಾನಮಾನವನ್ನು ನೀಡಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನಿರ್ಧರಿಸಿದ್ದಾರೆ.
ಭಾರತ ವಲಸಿಗರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ 5 ಮಿಲಿಯನ್ಗೂ ಅಧಿಕ ವಲಸಿಗರಿಗೆ ಕಾನೂನಾತ್ಮಕ ಸ್ಥಾನಮಾನ ನೀಡುವ ಕುರಿತು ಬರಾಕ್ ಒಬಾಮ ನಿರ್ಧಾರ ಕೈಗೊಂಡಿದ್ದಾರೆ.
ಅಮೆರಿಕಾದಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಭಾರತದಿಂದ ವಲಸೆ ಬಂದಿರುವ ತಾಂತ್ರಿಕ ವರ್ಗದ ಭಾರತೀಯರಿಗೆ ವಿಶೇಷವಾಗಿ ಎಚ್.1ಬಿ ಬಗೆಯ ವಿಸಾ ಹೊಂದಿರುವವರಿಗೆ ಈ ಸವಲತ್ತುಗಳನ್ನು ಒದಗಿಸಲು ಮುಂದಾಗಿದೆ.
ನಿಗದಿತ ವಿಸಾ ಪತ್ರಗಳನ್ನು ಹೊಂದದಿರುವ 11 ಮಿಲಿಯನ್ಗೂ ಹೆಚ್ಚಿನ ಕಾರ್ಮಿಕರ ಪೈಕಿ 5 ಮಿಲಿಯನ್ ಕಾರ್ಮಿಕ ವಲಸಿಗರಿಗೆ ಕಾನೂನಿನ ಚೌಕಟ್ಟಿನಲ್ಲಿ ವಿಸಾ ನೀಡಲು ಅಮೆರಿಕಾ ಸರ್ಕಾರ ಕ್ರಮ ಕೈಗೊಂಡಿದೆ.
ಅಕ್ರಮ ವಲಸೆಗಳನ್ನು ತಡೆಯುವ ಸಲುವಾಗಿ ಗಡಿಭಾಗದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಒಬಾಮ ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳು, ಉದ್ಯಮಿಗಳು, ವಾಣಿಜ್ಯೋದ್ಯಮಿ ವಲಸಿಗರಿಗೆ ವ್ಯವಸ್ಥಿತ ರೀತಿಯಲ್ಲಿ ಕಾನೂನಾತ್ಮಕವಾಗಿ ವಿಸಾ ಒದಗಿಸಲು ಶೀಘ್ರ ಮತ್ತು ಸುಲಭಕರವಾದ ವ್ಯವಸ್ಥೆಗಳನ್ನು ರೂಪಿಸಲಾಗಿದೆ.
ಅಲ್ಲದೇ ದೇಶದಲ್ಲಿ ವಾಸಿಸುತ್ತಿರುವ ದಾಖಲೆರಹಿತ ಲಕ್ಷಾಂತರ ವಲಸಿಗರಿಗೆ ಅತಿಶೀಘ್ರದಲ್ಲೇ ದಾಖಲೆಗಳನ್ನು ನೀಡಲಾಗವುದು ಎಂದು ಅವರು ವಿವರಿಸಿದರು.
ಅಮೆರಿಕ ಸಹ ಒಂದು ವಲಸಿಗರ ರಾಷ್ಟ್ರವಾಗಿದೆ. ಇಲ್ಲಿ ಲಕ್ಷಾಂತರ ಮಂದಿ ದಾಖಲೆರಹಿತವಾಗಿ ವರ್ಷಗಟ್ಟಲೆ ವಾಸಿಸುತ್ತಿದ್ದಾರೆ. ಆದರೆ ವಲಸೆ ಕಾನೂನಿನ ನೀತಿ ನಿಯಮಗಳನ್ನು ಉಲ್ಲಂಘಿಸಿ, ದೇಶಕ್ಕೆ ಅಪಾಯಕಾರಿ ತರುವ ವಲಸಿಗರ ವಿರುದ್ದ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇಶದಲ್ಲಿ ಅಪರಾಧಗಳ ಶೇ.80ಕ್ಕೆ ಏರಿಕೆಯಾಗಿದೆ. ದೇಶದ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
Advertisement