ಬೀದಿಗಿಳಿದ ಬಿಜೆಪಿ

ಭೂ ಹಗರಣದಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ನಾಲ್ವರು...
ಪ್ರತಿಭಟನಾ ನಿರತ ಬಿಜೆಪಿ ರಾಜ್ಯ ಮುಖಂಡರು
ಪ್ರತಿಭಟನಾ ನಿರತ ಬಿಜೆಪಿ ರಾಜ್ಯ ಮುಖಂಡರು

ಬೆಂಗಳೂರು: ಭೂ ಹಗರಣದಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ನಾಲ್ವರು ಸಚಿವರ ವಿರುದ್ಧ ಬಿಜೆಪಿ ರಾಜ್ಯ ಮುಖಂಡರು ಬೀದಿಗಳಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯದ ಉಸ್ತುವಾರಿ ಮುರಳೀಧರ್ ರಾವ್ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಗಾಂಧಿ ಪ್ರತಿಮೆ ಎದುರು ಧರಣಿ ಕೂರಲು ಪ್ರಯತ್ನಿಸಿದರು. ಆದರೆ, ತಡೆದ ಪೊಲೀಸರು ಅವರನ್ನು ಬಂಧಿಸಿದರು.

ಸಚಿವರಾದ ಕೆ.ಜೆ.ಜಾರ್ಜ್, ಎಚ್.ಎಸ್.ಮಹದೇವ ಪ್ರಸಾದ್, ಖಮರುಲ್ ಇಸ್ಲಾಂ ಹಾಗೂ ದಿನೇಶ್ ಗುಂಡೂರಾವ್ ಅವರ ರಾಜಿನಾಮೆಗೆ ಆಗ್ರಹಿಸಿ ವಿಧಾನಸೌಧ ಹಾಗೂ ವಿಕಾಸಸೌಧ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು ಪಕ್ಷದ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಧರಣಿಗೆ ಬಿಜೆಪಿ ರಾಜ್ಯ ಘಟಕ ನಿರ್ಧರಿಸಿತ್ತು. ಆದರೆ ಬಿಜೆಪಿ ಮುಖಂಡರು, ಗಾಂಧಿ ಪ್ರತಿಮೆ ಎದುರು ಧರಣಿ ಕೂರಲು ಪ್ರತ್ನಿಸಿದರು.

ಸಚಿವರಾದ ಕೆ.ಜೆ.ಜಾರ್ಜ್, ಎಚ್.ಎಸ್.ಮಹದೇವ ಪ್ರಸಾದ್, ಖಮರುಲ್ ಇಸ್ಲಾಂ ಹಾಗೂ ದಿನೇಶ್ ಗುಂಡೂರಾವ್ ಅವರ ರಾಜಿನಾಮೆಗೆ ಆಗ್ರಹಿಸಿ ವಿಧಾನಸೌಧ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು ಪಕ್ಷದ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಧರಣಿಗೆ ಬಿಜೆಪಿ ರಾಜ್ಯ ಘಟಕ ನಿರ್ಧರಿಸಿತ್ತು. ಆದರೆ ಬಿಜೆಪಿ ಮುಖಂಡರನ್ನು ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿ ಹೊರಗಡೆಯೇ ಬಂಧಿಸಲು ಪೊಲೀಸರು ಮುಂದಾದರು.

ಬಳಿಕ ವಿಧಾನಸೌಧ ಪೂರ್ವದ್ವಾರದಿಂದ ಕೆಂಗಲ್ ಹನುಮಂತಯ್ಯ ಪ್ರತಿಮೆಯವರೆಗೆ ಧಿಕ್ಕಾರ ಕೂಗುತ್ತ ಸಾಗಿದ ಬಿಜೆಪಿ ಮುಖಂಡರನ್ನು ಮುಂದೆ ತೆರಳಲು ಪೊಲೀಸರು ಬಿಡಲಿಲ್ಲ. ಪ್ರತಿಮೆಯತ್ತ ನುಗ್ಗಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ.

ಬಿ.ಎಸ್.ಯಡಿಯೂರಪ್ಪ ಪೊಲೀಸರು ಅವಕಾಶ ನೀಡಲಿಲ್ಲ. ಬಿ.ಎಸ್.ಯಡಿಯೂರಪ್ಪ, ಮುರಳೀಧರ್ ರಾವ್, ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರು ಹಾಗೂ ಸಂಸದರನ್ನು ಪೊಲೀಸರು ಬಂಧಿಸಿದರು.

ಅನುಮತಿಗಾಗಿ ಗಲಾಟೆ

ಗಾಂಧಿ ಪ್ರತಿಮೆ ಎದುರು ಧರಣ ನಡೆಸಲು ಅವಕಾಶ ದೊರೆತಿದೆ. ಆದರೂ ಶಾಸಕರನ್ನು ವಿಧಾನಸೌಧಕ್ಕೂ ಬರಲು ಬಿಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪೊಲೀಸರೊಂದಿಗೆ ವಾಕ್ಲಮರ ನಡೆಸಿದರು. ಇದಕ್ಕೂ ಮುಂಚೆ ಪೊಲೀಸರು ವಿಕಾಸಸೌಧ ಹಾಗೂ ವಿಧಾನಸೌಧಕ್ಕೆ ಬರುವ ಮುಖ್ಯದ್ವಾರ ಬಿಟ್ಟು ಉಳಿದೆಲ್ಲವನ್ನೂ ಮುಚ್ಚಿದ್ದರು.

ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ನೀಡುತ್ತಿರಲಿಲ್ಲ. ಗಾಂಧಿ ಪ್ರತಿಮೆ ಎದುರು ಪ್ರತಿಭಟಿಸಬಾರದೆಂಬ ಆದೇಶವಿದ್ದರೆ ಅದನ್ನು ತೋರಿಸುವಂತೆ ಪೊಲೀಸರಿಗೆ ಮುಖಂಡರು ಆಗ್ರಹಿಸಿದರು. ಇದಕ್ಕೆ ಉತ್ತರಿಸಲು ಪೊಲೀಸರು ವಿಫಲರಾದರು. ಆದಾಗ್ಯೂ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ಗಾಂಧಿ ಪ್ರತಿಮೆ ಎದುರು ಹೋಗಿ ಧರಣಿ ಕುಳಿತಾಗ ಪೊಲೀಸರು ಬಂಧಿಸಿ ಬಿಎಂಟಿಸಿ ಬಸ್‌ನಲ್ಲಿ ಕೊಂಡೊಯ್ದರು.

ಕೇವಲ 4 ಸಂಸದರು

ಸರ್ಕಾರದ ವಿರುದ್ಧದ ಧರಣಿಯಲ್ಲಿ ಎಲ್ಲ ಸಂಸದರು ಹಾಗೂ ಶಾಸಕರು ಭಾಗವಹಿಸಬೇಕೆಂದು ಬಿಡೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸೂಚಿಸಿದ್ದರು. ಆದರೆ, ನಾಲ್ವರು ಸಂಸದರು ಮಾತ್ರ ಭಾಗವಹಿಸಿ ಪಕ್ಷ ನಿಷ್ಠೆ ಮೆರೆದರು.

ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಪ್ರತಾಪ್‌ಸಿಂಹ ಹಾಗೂ ಪಿ.ಸಿ.ಮೋಹನ್ ಹೊರತುಪಡಿಸಿ ಮತ್ಯಾವುದೇ ಸಂಸದರು ಹಾಗೂ ರಾಜ್ಯ ಸಭೆ ಸದಸ್ಯ.ರು ಆ ಕಡೆ ಸುಳಿಯಲೂ ಇಲ್ಲ. ಉತ್ತರ ಕರ್ನಾಟಕ ಭಾಗದ ಕೆಲವು ಶಾಸಕರೂ ಗೈರು ಹಾಜರಾಗಿದ್ದರು.  

ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಗೂ ಅವಕಾಶ ಕೊಡದೆ ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದೆ. ವಿನಾಶ ಕಾಲೇ ವಿಪರೀತ ಬುದ್ಧಿ೤ ಎಂಬಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ರಾಜ್ಯದ ಜನತೆ ಪರವಾಗಿ ಹೋರಾಟ ನಡೆಸಿದರೆ ಬೇಡಿಕೆ ಕೇಳುವ ಸಾಮಾನ್ಯ ಕಳಕಳಿಯನ್ನೂ ತೋರದ ಮುಖ್ಯಮಂತ್ರಿ ಪ್ರತಿಭಟನೆ ಹತ್ತಿಕ್ಕಲು ಪೊಲೀಸರನ್ನು ಕಳುಹಿಸಿದ್ದಾರೆ. ಸಚಿವರ ವಿರುದ್ಧದ ಭೂ ಹಗರಣ ಕುರಿತಂತೆ ದಾಖಲೆಗಳಿದ್ದರೂ ಕ್ರಮ ಜರುಗಿಸಲು ಅವರಿಗೇನು ಕರ್ಮ?

ಬಿ.ಎಸ್.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ


ಸಚಿವರ ಮೇಲಿನ ಆರೋಪಗಳು ಸಾಬೀತಾಗಿಲ್ಲದ ಕಾರಣ ಯಾರನ್ನೂ ಕೈ ಬಿಡುವುದಿಲ್ಲ. ಹಿಂದಿನ ಸರ್ಕಾರದಲ್ಲಿ ವಿ.ಸೋಮಣ್ಣ, ಈಶ್ವರಪ್ಪ ಸೇರಿದಂತೆ ಅನೇಕರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅವರನ್ನು ಸಂಪುಟದಿಂದ ಕೈ ಬಿಟ್ಟ್ಟಿದ್ದರೇ? ದಿನೇಶ್ ಗುಂಡೂ ರಾವ್ ಆರೋಪದ ಬಗ್ಗೆ  ವಿವರಣೆ ನೀಡಿದ್ದಾರೆ. ಅವರು ಸರ್ಕಾರಿ ಆಸ್ತಿ ಒತ್ತುವರಿ ಮಾಡಿಲ್ಲ. ತಂದೆ ಕಾಲದ ಆಸ್ತಿಯನ್ನು ವಾಪಸ್ ಪಡೆಯಲು ಹೇಳಿದ್ದಾರೆ. ಇನ್ನು ಮಹಾದೇವಪ್ರಸಾದ್ ಅವರ ವಿರುದ್ಧದ ಪ್ರಕರಣದಲ್ಲಿ ಬಿ.ರಿಪೋರ್ಟ್ ಆಗಿದೆ.

ಸಿದ್ದರಾಮಯ್ಯ
ಮುಖ್ಯಮಂತ್ರಿ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com