ಪ್ರಧಾನಿ ಮೋದಿಯಿಂದ ನನ್ನ ಯೋಜನೆ 'ನಕಲು': ಮುಲಾಯಂ ಸಿಂಗ್

ಗ್ರಾಮಗಳ ದತ್ತು, ಶೌಚಾಲಯಗಳ ನಿರ್ಮಾಣ ಮಾಡುವ ಯೋಜನೆ ನನ್ನದ್ದು, ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ...
ನರೇಂದ್ರ ಮೋದಿ, ಮುಲಾಯಂ ಸಿಂಗ್ ಯಾದವ್
ನರೇಂದ್ರ ಮೋದಿ, ಮುಲಾಯಂ ಸಿಂಗ್ ಯಾದವ್

ಲಖನೌ: ಗ್ರಾಮಗಳ ದತ್ತು, ಶೌಚಾಲಯಗಳ ನಿರ್ಮಾಣ ಮಾಡುವ ಯೋಜನೆ ನನ್ನದ್ದು, ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಕಲು ಮಾಡಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಆರೋಪಿಸಿದ್ದಾರೆ.

ಗ್ರಾಮಗಳ ದತ್ತು ಪಡೆಯುವುದರ ಬಗ್ಗೆ ನರೇಂದ್ರ ಮೋದಿ ಅವರು ಮಾತನಾಡುತ್ತಿದ್ದಾರೆ. ಆದರೆ 1990ರಲ್ಲೇ ನಾನು ಗ್ರಾಮವೊಂದನ್ನು ದತ್ತು ಪಡೆದಿದ್ದೆ. ಅದೇ ರೀತಿ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೆ ಅದನ್ನೇ ಪ್ರಧಾನಿ ಮೋದಿ ಅವರು ನಕಲು ಮಾಡಿ ತಮ್ಮದೆ ಯೋಜನೆಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.

ಇದೇ ವೇಳೆ, ಸಮಾಜವಾದಿ ಶಾಸಕರು ಮತ್ತು ಸಚಿವರು ಸೇರಿದಂತೆ ಪಕ್ಷದ ಮುಖಂಡರಿಗೆ ಪ್ರತಿಯೊಬ್ಬರು ಕನಿಷ್ಠ ಎರಡು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡಿ. ತಮ್ಮ ತಮ್ಮ ಜಾಗದಲ್ಲಿ ಕಾರ್ಯ ನಿರ್ವಹಿಸಿದರೆ ಜವಾಬ್ದಾರಿಯನ್ನು ಅರಿತುಕೊಳ್ಳುವಿರಿ. ಆಗ ದೇಶ ಸಹ ಅಭಿವೃದ್ಧಿ ಪತದಲ್ಲಿ ಹೆಜ್ಜೆ ಹಾಕುತ್ತದೆ ಎಂಬ ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವನ್ನು ಸ್ವಾಗತಿಸಿದ ಮುಲಾಯಂ, ಮೋದಿ ಅವರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದು ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಮ್ಮ ನೆರೆಹೊರೆಯವರ ಉತ್ತಮ ಸಂಬಂಧವಿಟ್ಟುಕೊಳ್ಳುವುದರಿಂದ ದ್ವೇಷ ಭಾವ ಕಡಿಮೆಯಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com