
ಶ್ರೀನಗರ: ಜಮ್ಮು ಕಾಶ್ಮೀರದ ವಿಧಾನಸಭೆಗೆ ನಾಳೆ ಚುನಾವಣೆ ನಡೆಯಲಿದ್ದು, ಎಲ್ಲಿಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಶ್ರೀನಗರ ಸೇನಾ ಸಿಬ್ಬಂದಿ ನೆನ್ನೆ ನುಸುಳುಕೋರರ ಗುಂಪಿನಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅಮೋನಿಯಂ ಶಸ್ತ್ರಾಸ್ರ್ತಗಳು, 18 ಎಕೆ 47 ಬಂದೂಕುಗಳು ಸೇರಿದಂತೆ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಘಟನೆಯ ಬಳಿಕ ನಗರದ ಸುತ್ತ ಮುತ್ತಲು ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ನಾಳೆಯಿಂದ ನಡೆಯಲಿರುವ ಚುನಾವಣೆಯು ಒಟ್ಟು 5 ಹಂತಗಳಲ್ಲಿ ನಡೆಯಲಿದೆ. ಒಟ್ಟು 15 ವಿಧಾನಸಭಾ ಕ್ಷೇತ್ರಗಳ 123 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಮೊದಲ ಹಂತದ ಚುನಾವಣೆಯಲ್ಲಿ ಕಿಶ್ತಾವರ್, ಇಂದೆರ್‌ವಾಲ್, ದೋರಾ, ಭದೇರ್ವಾ, ರಾಮ್ಬಾನ್ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ. 15 ವಿಧಾನಸಭಾ ಕ್ಷೇತ್ರಗಳ ಪೈಕಿ ಭಾದೆರ್ವಾತ್ ಅತ್ಯಂತ ದೊಡ್ಡ ವಿಧಾನ ಸಭಾ ಕ್ಷೇತ್ರವಾಗಿದ್ದು, 1,04,354 ಅಭ್ಯರ್ಥಿಗಳನ್ನು ಹೊಂದಿದ್ದರೆ, ಅತ್ಯಂತ ಕಿರಿಯ ವಿಧಾನಸಭಾ ಕ್ಷೇತ್ರ ಲಡಾಕ್‌ನ ನೊಬ್ರಾ, ಬರಿ 13 ಸಾವಿರದ 54 ಅಭ್ಯರ್ಥಿಗಳನ್ನು ಹೊಂದಿದೆ.
5,49,698 ಪುರುಶರು, 5,00,539 ಮಹಿಳೆಯರು ಸೇರಿದಂತೆ 10,50,250 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಮೊದಲ ಹಂತದ ಚುವನಾವಣೆಯಲ್ಲಿ 7 ಸಚಿವರು ಸ್ಪರ್ಧಾ ಕಣದಲ್ಲಿದ್ದು, ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾನೆ ಎಂಬುದು ಕುತೂಹಲ ಕೆರಳಿಸಿದೆ.
ಚುನಾವಣೆಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಚುನಾವಣಾ ಆಯೋಗ ಬಿಗಿ ಭದ್ರತಾ ಕ್ರಮ ಕೈಗೊಂಡಿದೆ.
Advertisement