ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಡ್ಯಾಂ ನಿರ್ಮಿಸಿದ ಚೀನಾ

ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಪೂಣಗೊಂಡಿದೆ ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿದೆ ಎಂದು ಚೀನಾ ಘೋಷಿಸಿದೆ.

ಟಿಬೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಜಲವಿದ್ಯುತ್ ಅಣೆಕಟ್ಟು ಪೂರ್ಣಗೊಂಡಿದ್ದು, ಅಣೆಕಟ್ಟಿಗೆ 'ಯಾರ್ಲಾಂಗ್ ಜಂಗ್ಬೋ' ಎಂದು ಹೆಸರಿಡಲಾಗಿದೆ.

ಚೀನಾ ನಿರ್ಮಿಸಿರುವ ಅಣೆಕಟ್ಟಿನಿಂದಾಗಿ ಭಾರತ ಮತ್ತು ಬಾಂಗ್ಲಾದೇಶಗಳು ಆತಂಕಕ್ಕೀಡಾಗಿವೆ. ಚೀನಾ ನಿರ್ಮಿಸಿರುವ ಡ್ಯಾಂನಿಂದಾಗಿ ಭೀಕರ ಪ್ರವಾಹ ಮತ್ತು ಭೂಕೂಸಿತ ಹೆಚ್ಚಾಗುವ ಸಾಧ್ಯತೆ ಇದ್ದು, ಅನೇಕ ಪ್ರಾಣ ಹಾನಿಗೆ ಕಾರಣವಾಗಲಿದೆ ಎಂದು ತಿಳಿದು ಬಂದಿದೆ.

ಅಣೆಕಟ್ಟು ನಿರ್ಮಿಸಬೇಡಿ ಎಂದು ಭಾರತ ಮನವಿ ಮಾಡಿದ್ದರು, ಗಣನೆಗೆ ತೆಗೆದುಕೊಳ್ಳದ ಚೀನಾ, ಅಣೆಕಟ್ಟು ನಿರ್ಮಾಣವನ್ನು ಪೂರ್ಣಗೊಳಿಸಿದೆ. ಅಣೆಕಟ್ಟುಗಳ ನಿರ್ಮಾಣದಿಂದ ಭಾರತಕ್ಕೆ ನೀರಿನ ಹರಿವು ಕಡಿಮೆ ಆಗಲಿದೆ.

ಬ್ರಹ್ಮಪುತ್ರ ನದಿಯಲ್ಲಿ ಅಣೆಕಟ್ಟು ಕಟ್ಟುತ್ತಿರುವ ಚೀನಾದ ಕ್ರಮಕ್ಕೆ ಭಾರತದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಇದನ್ನು ಲೆಕ್ಕಿಸದಾ ಚೀನಾ ಮತ್ತೆ ಮೂರು ಹೊಸ ಅಣೆಕಟ್ಟುಗಳನ್ನು ನಿರ್ಮಿಸಲು ಸಿದ್ಧತೆಗಳನ್ನು ನಡೆಸಿದೆ. ಬ್ರಹ್ಮ ಪುತ್ರ ನದಿಯ ಹರಿವನ್ನು ತಿರುವುಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಭಾರತ ಈ ಹಿಂದೆ ಆಕ್ಷೇಪಿಸಿತ್ತು.

ಆದರೆ ಇದನ್ನು ಅಲ್ಲೆಗೆಳೆದ ಚೀನಾ ತನ್ನ ಈ ಯೋಜನೆಯಿಂದ ನದಿ ಹರಿವಿಗೆ ಯಾವುದೇ ರೀತಿಯ ಅಡ್ಡಿಯಿಲ್ಲ ಎಂದು ಪ್ರತಿಪಾದಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com