ಲ್ಯಾಪ್‌ಟಾಪ್ ಹಗರಣ: 300 ನ್ಯಾಯಾಧೀಶರ ವಿಚಾರಣೆ

ಲ್ಯಾಪ್‌ಟಾಪ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕೆಳಹಂತದ ನ್ಯಾಯಾಲಯದ...
ಲ್ಯಾಪ್‌ಟಾಪ್ ಹಗರಣ: 300 ನ್ಯಾಯಾಧೀಶರ ವಿಚಾರಣೆ

ನವದೆಹಲಿ: ಲ್ಯಾಪ್‌ಟಾಪ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕೆಳಹಂತದ ನ್ಯಾಯಾಲಯದ 300 ನ್ಯಾಯಾಧೀಶರು ವಿಚಾರಣೆಗೆ ಒಳಪಡಲಿದ್ದಾರೆ.

2013ರಲ್ಲಿ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಖರೀದಿಗಾಗಿ ದೆಹಲಿ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಆದರೆ, ಖರೀದಿ ಮಾಡುವಾಗ ಇದರಲ್ಲಿ ಹಗರಣ ನಡೆದಿರುವುದಾಗಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಕೆಳ ನ್ಯಾಯಾಲಯದ 300 ನ್ಯಾಯಾಧೀಶರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಖರೀದಿಯಲ್ಲಿ ನ್ಯಾಯಾಧೀಶರು ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ತನಿಖೆ ನಡೆಸಲು ಎಂದು ಹೈಕೋರ್ಟ್‌ನ ಮೂವರು ನ್ಯಾಯಾಧೀಶರನ್ನೊಳಗೊಂಡ ಉನ್ನತ ಮಟ್ಟದ ಪೀಠ ರಚಿಸಲಾಗಿದೆ.

ಯಾವ ರೀತಿಯಲ್ಲಿ ನ್ಯಾಯಾಧೀಶರು ಹಣವನ್ನು ಬಳಸಿಕೊಂಡಿದ್ದಾರೆ ಎಂದು ವಿಚಾರಣೆ ನಡೆಸಿ ವರದಿ ಸಲ್ಲಿಸಿ ಎಂದು ಪೀಠಕ್ಕೆ ಹೈಕೋರ್ಟ್‌ನ ಮುಖ್ಯನ್ಯಾಯಾಧೀಶರಾದ ಜಿ.ರೋಹಿನಿ ಸೂಚಿಸಿದ್ದಾರೆ.

ವಿಚಾರಣೆಗೆ ಅನುಕೂಲವಾಗಲೆಂದು ನ್ಯಾಯಾಧೀಶರಿಗೆ ಲ್ಯಾಪ್‌ಟಾಪ್ ಖರೀದಿಸಲು ತಲಾ ರು. 1.1 ಲಕ್ಷ ಹಣವನ್ನು ಸರ್ಕಾರ ಮತ್ತು ದೆಹಲಿ ಹೈಕೋರ್ಟ್ ಬಿಡುಗಡೆ ಮಾಡಿತ್ತು. ಆದರೆ, ಇದರಲ್ಲಿ ಹಗರಣ ನಡೆದಿದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com