ಮಿಜೋರಾಂ ಸಾಕ್ಷರತಾ ಪ್ರಮಾಣ ೯೧.೩೩%

ಮಿಜೋರಾಂನ ಸಾಕ್ಷರತಾ ಪ್ರಮಾಣ ೯೧.೩೩%ಗೆ ಏರಿದ್ದು, ಕೇರಳ ಮತ್ತು ಲಕ್ಷದ್ವೀಪದ ನಂತರ...
ಮಿಜೋರಾಂ ಭೂಪಟ
ಮಿಜೋರಾಂ ಭೂಪಟ
Updated on: 

ಐಜಾವ್ಲ್: ಮಿಜೋರಾಂನ ಸಾಕ್ಷರತಾ ಪ್ರಮಾಣ ೯೧.೩೩%ಗೆ ಏರಿದ್ದು, ಕೇರಳ ಮತ್ತು ಲಕ್ಷದ್ವೀಪದ ನಂತರ ಮೂರನೇ ಸ್ಥಾನದಲ್ಲಿದೆ ಎಂದು ರಾಜ್ಯದ ಸಚಿವರೊಬ್ಬರು ತಿಳಿಸಿದ್ದಾರೆ.

ಮಿಜೋರಾಂ ಕೇಂದ್ರದ ಸರ್ಚಿಪ್ ಜಿಲ್ಲೆಯಲ್ಲಿ ೯೭.೯೧% ನೊಂದಿಗೆ ಅತಿ ಹೆಚ್ಚು ಸಾಕ್ಷರತಾ ಪ್ರಮಾಣವನ್ನು ಸಾಧಿಸಿದ್ದು, ನಂತರ ಐಜಾವ್ಲ್ ನಲ್ಲಿ ೯೭.೮೯% ಸಾಕ್ಷರತೆಯನ್ನು ಸಾಧಿಸಲಾಗಿದೆ ಎಂದು ಶಿಕ್ಷಣ ಸಚಿವ ಎಚ್ ರೋಹ್ಲುನಾ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಅತಿ ಕಡಿಮೆ ಸಾಕ್ಷರತೆ ದಕ್ಷಿಣದ ಲಾಂಗ್ಟಲೈ ಜಿಲ್ಲೆಯಲ್ಲಿ ೬೫.೮೮% ಇದೆ. ಮಿಜೋರಾಂ-ಬಾಂಗ್ಲಾದೇಶ-ತ್ರಿಪುರಾ ಗಡಿಯಲ್ಲಿರುವ ಮಾಮಿತ್ ಜಿಲ್ಲೆ ಮತ್ತು ಲುಂಗ್ಲೈ ಜಿಲ್ಲೆಗಳಲ್ಲಿ ಕ್ರಮವಾಗಿ ೮೪.೩% ಮತ್ತು ೮೮.೮೬% ಸಾಕ್ಷರತೆ ಇದೆ.

ರಾಜ್ಯದಲ್ಲಿ, ಅದರಲ್ಲೂ ಲಾಂಗ್ಟಲೈ, ಮಾಮಿತ್ ಮತ್ತು ಲುಂಗ್ಲೈ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಎನ್ ಜಿ ಒ ಗಳು ಮತ್ತು ಚರ್ಚಿನ ಉಪಾಧ್ಯಾಯರುಗಳೊಂದಿಗೆ ಕೂಡಿಕೊಂಡು ಹೆಚ್ಚಿನ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com