
ಗೌಹಾಟಿ:ಪ್ರಧಾನಿ ನರೇಂದ್ರ ಮೋದಿ ನವೆಂಬರ್ ೨೯ ರಂದು ಅಸ್ಸಾಂಗೆ ಎರಡು ದಿನದ ಭೇಟಿಗೆ ತೆರಳಲಿದ್ದಾರೆ ಎಂದು ಅಧಿಕೃತ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಲೋಕಪ್ರಿಯ ಬೋರ್ದೋಲೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಪ್ರಧಾನಿ, ಅಲ್ಲಿಂದ ನೇರವಾಗಿ ಮಾಲಿಗಾವ್ ಆಟದ ಮೈದಾನಕ್ಕೆ ತೆರಳಿ ಮೇಘಾಲಯದ ಮೆಂಡಿಪಾಥರ್ ನಿಂದ ಗೌಹಾಟಿಗೆ ಹೋಗಲಿರುವ ಮೊದಲ ರೈಲಿಗೆ ರಿಮೋಟ್ ಕಂಟ್ರೋಲಿನ ಮೂಲಕ ಚಾಲನೆ ನೀಡಲಿದ್ದಾರೆ.
ಹಾಗೆಯೇ ದ ಅಸ್ಸಾಂ ಟ್ರಿಬ್ಯೂನ್ ದಿನಪತ್ರಿಕೆಗಳ ಗುಂಪಿನ ೭೫ ನೆ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ.
ರಾಜ ಭವನದಲ್ಲಿ ಉಳಿಯಲಿರುವ ಪ್ರಧಾನಿ ಮೋದಿ, ನವೆಂಬರ್ ೩೦ ರಂದು ಪೋಲೀಸ್ ನಿರ್ದೇಶಕರ ಸಮಾವೇಶವನ್ನು ಉದ್ಘಾಟಿಸಿ ನಂತರ ಇಂಫಾಲ್ ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
Advertisement