ಶ್ರೀಲಂಕಾದಲ್ಲಿ ನಾಲ್ವರು ಭಾರತೀಯ ಮೀನುಗಾರರ ಬಂಧನ

ಸಮುದ್ರದ ಅಲೆಗಳ ಹೆಚ್ಚಾಗಿದ ಪರಿಣಾಮ ಜೀವರಕ್ಷಣೆಗಾಗಿ ಶ್ರೀಲಂಕಾ ಸಮುದ್ರ ಗಡಿ...
ಶ್ರೀಲಂಕಾದಲ್ಲಿ ನಾಲ್ವರು ಭಾರತೀಯ ಮೀನುಗಾರರ ಬಂಧನ

ಮದುರೈ: ತಮಿಳುನಾಡಿನ ನಾಗಪಟ್ಟಣಂಗೆ ಸೇರಿದ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸಿಬ್ಬಂದಿ, ಶ್ರೀಲಂಕಾ ಗಡಿ ಪ್ರವೇಶ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ.

ನಾಗಪಟ್ಟಣಂನಲ್ಲಿನ ಪುಷ್ಪವನಂ ಗ್ರಾಮದ ನಿವಾಸಿಗಳಾದ ನಾಲ್ವರು ಮೀನುಗಾರರು, ನೆನ್ನೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಕಾಣೆಯಾಗಿದ್ದರು ಎಂದು ಪ್ರಕರಣ ದಾಖಲಿಸಲಾಗಿತ್ತು.

ನೆನ್ನೆ ಸಮುದ್ರದಲ್ಲಿ ಅಲೆಗಳ ಹೆಚ್ಚಾಗಿದ ಪರಿಣಾಮ ಜೀವರಕ್ಷಣೆಗಾಗಿ ಶ್ರೀಲಂಕಾ ಸಮುದ್ರ ಗಡಿಭಾಗದತ್ತೆ ತೆರಳಿದ್ದಾರೆ. ಈ ವೇಳೆ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾ ಪಡೆ ಸಿಬ್ಬಂದಿಗಳು ಈ ನಾಲ್ವರು ಮೀನುಗಾರರನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಈ ನಾಲ್ವರು ಮೀನುಗಾರರು ಶ್ರೀಲಂಕಾದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಮೀನುಗಾರಿಕಾ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಾರರು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ಪತ್ತೆಗಾಗಿ ಕರಾವಳಿ ಪೊಲೀಸರು ಹಾಗೂ ಕರಾವಳಿ ರಕ್ಷಣಾ ಸಿಬ್ಬಂದಿ ಮುಂದಾದರು.

ಬಂಧಿತ ನಾಲ್ವರು ಮೀನುಗಾರರನ್ನು ಶ್ರೀಲಂಕಾದಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ.

ಕಳೆದ ಭಾನುವಾರ ಶ್ರೀಲಂಕಾ ಸಮುದ್ರ ಗಡಿ ದಾಟಿದ ಆರೋಪದ ಮೇರೆಗೆ 14 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು. ಬಂಧಿತ ಮೀನುಗಾರರನ್ನು ಬಿಡುಗಡೆಗೊಳಿಸಲು ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಕಾನೂನಿನ ಹೋರಾಟದಲ್ಲಿ ನಿರತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com