
ಸೂರತ್: ಸೂರತ್‌ನ ಉದ್ಯಮಿಯೊಬ್ಬರು ಒಂದು, ಎರಡಲ್ಲ ಬರೋಬ್ಬರಿ 111 ವಧುಗಳನ್ನು ಧಾರೆ ಎರೆದು ಕೊಡುತ್ತಿದ್ದಾರೆ.
ಇದೇನಪ್ಪಾ ಈ ಉದ್ಯಮಿಗೆ 111 ಹೆಣ್ಣು ಮಕ್ಕಳ ಅಂತ ಅಂದುಕೊಂಡಿದ್ದರೇ ನಿಮ್ಮ ಊಹೆ ತಪ್ಪು. ತಂದೆಯಿಲ್ಲದ ತಬ್ಬಲಿ ಹೆಣ್ಮುಮಕ್ಕಳಿಗೆ ತಂದೆ ಸ್ಥಾನದಲ್ಲಿ ನಿಂತು ಮದುವೆ ಮಾಡಿಸುತ್ತಿದ್ದಾರೆ.
ಉದ್ಯಮಿ ಮಹೇಶ್ ಸವಾನಿ ತಂದೆ ಇಲ್ಲದೆ ಹೆಣ್ಮಕ್ಕಳಿಗೆ ತಾವೇ ತಂದೆ ಸ್ಥಾನದಲ್ಲಿ ನಿಂತು ಮದುವೆ ಮಾಡುತ್ತಿದ್ದಾರೆ. ಇಂದೇ ಮದುವೆ ನಡೆಯಲಿದ್ದು, ಮದುವೆಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಇದರಲ್ಲೇನಿದೆ ವಿಶೇಷತೆ ಸಾಮೂಹಿಕ ಮದುವೆಯೂ ಇದೇ ರೀತಿ ನಡೆಯುತ್ತದೆ ಎಂದು ಅನಿಸಬಹುದು.
ಆದರೆ ಈ ಮದವೆಯಲ್ಲಿದೆ ವಿಶೇಷತೆ. ಮಹೇಶ್ ಸವಾನಿ ನಡೆಸುತ್ತಿರುವ 111 ಹೆಣ್ಣುಮಕ್ಕಳ ಮದುವೆಗೆ ಉಡಗೊರೆಯಾಗಿ ಚಿನ್ನ, ಬೆಳ್ಳಿ ಆಭರಣ, ಫರ್ನೀಚರ್ ಸೇರಿದಂತೆ ಬರೋಬ್ಬರಿ 45 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.
ಈ ಅದ್ಧೂರಿ ಮದುವೆಯು ಸೂರತ್‌ನ ಅಬ್ರಮಾ ಪ್ರದೇಶದಲ್ಲಿರುವ ಶಾಲೆಯ ಆವರಣದಲ್ಲಿ ನಡೆಸಲಾಗುತ್ತಿದೆ. ಎಲ್ಲಾ ಧರ್ಮದ ವಧುಗಳಿಗೆ ಧಾರೆ ಎರೆಯಲು ಸಜ್ಜಾಗಿರುವ ಮಹೇಶ್, ಆಯಾ ಧರ್ಮಗಳ ವಧುಗಳಿಗೆ ಆಯಾ ಧರ್ಮದ ಪದ್ಧತಿಯಂತೆ ಮಾಡಿಕೊಡಲಾಗುತ್ತದೆ.
ಈ ಮದುವೆಗಾಗಿ ನಾನು ಯಾರ ಬಳಿಯೂ ದೇಣಿಗೆ ಕೇಳುವುದಿಲ್ಲ. ನನ್ನ ಕೈಲಾದ ಮಟ್ಟಿಗೆ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ. ವಧು-ವರರು ತಮ್ಮ ದಾಂಪತ್ಯ ಜೀವನದಲ್ಲಿ ಸುಖವಾಗಿರಲಿ ಎಂಬುದು ನನ್ನ ಆಶಯ ಎಂದು ಮಹೇಶ್ ಸವಾನಿ ಹೇಳಿದ್ದಾರೆ.
Advertisement