ಮಾನಸ ಸರೋವರಕ್ಕೆ ಮುಂದಿನ ವರ್ಷದಿಂದ ಸಿಕ್ಕಿಂ ದಾರಿ!

ಮಾನಸ ಸರೋವರಕ್ಕೆ ಸಿಕ್ಕಿಂ ಮೂಲಕ ಮಾರ್ಗ ತೆರೆಯುವ ಸಂಬಂಧ...
ಮಾನಸ ಸರೋವರ
ಮಾನಸ ಸರೋವರ

ಗ್ಯಾಂಗ್‌ಟಾಕ್: ಹಿಂದೂಗಳ ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆ ಹಾದಿ ಇನ್ನಷ್ಟು ಸುಗಮವಾಗಲಿದೆ. ಮುಂದಿನ ವರ್ಷದಿಂದ ಸಿಕ್ಕಿಂ ನಾಥುಲೂ ಮಾರ್ಗದ ಮೂಲಕ ಮಾನಸ ಸರೋವರ ಯಾತ್ರೆ ಕೈಗೊಳ್ಳುವುದು ಸಾಧ್ಯವಾಗಲಿದೆ.

ಸದ್ಯ ಯಾತ್ರಾರ್ಥಿಗಳು ಉತ್ತರ ಖಂಡದ ಲಿಪ್‌ಲೇಖ್ ಮಾರ್ಗದ ಮೂಲಕ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದು ದುರ್ಗಮ ಹಾದಿಯಾಗಿದ್ದು, ಅನೇಕ ಕಡೆ ಯಾತ್ರಾರ್ಥಿಗಳು ಹಲವು ಕಿ.ಮೀ. ಚಾರಣ ನಡೆಸಬೇಕಿದೆ. ಹಾಗಾಗಿ ವಯೋವೃದ್ಧರು ಈ ಹಾದಿಯಲ್ಲಿ ಸಾಗಲು ಸಾಕಷ್ಟು ಪ್ರಯಾಸ ಪಡಬೇಕಿದೆ.

ಜೂನ್‌ವೇಳೆಗೆ : ಮಾನಸ ಸರೋವರಕ್ಕೆ ಸಿಕ್ಕಿಂ ಮೂಲಕ ಮಾರ್ಗ ತೆರೆಯುವ ಸಂಬಂಧ ಭಾರತ ಮತ್ತು ಚೀನಾ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದೆ. ಹೊಸ ಮಾರ್ಗಕ್ಕೆ ಸಂಬಂಧಿಸಿ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಜೂನ್ ವೇಳೆಗೆ ಭಾರತದಿಂದ ಮೊದಲ ಯಾತ್ರಿಗಳ ತಂಡ ನಾಥುಲಾ ಮಾರ್ಗದ ಮೂಲಕ ಯಾತ್ರೆ ಆರಂಭಿಸಲಿದೆ. ಮೊದಲ ತಂಡದಲ್ಲಿ 1,600 ಮಂದಿ ಇರಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com